ಮೋದಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಧ್ವಂಸ ಮಾಡಿದ ಪ್ರಥಮ ಪ್ರಧಾನಿ: ರಾಹುಲ್ ಗಾಂಧಿ!

ನ್ಯೂಸ್ ಕನ್ನಡ ವರದಿ(17-04-2018): ರಾಷ್ಟ್ರದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೀರ್ತಿ ಪ್ರಧಾನಿ ಮೋದಯವರಿಗೆ ಸಲ್ಲಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟ್ ಬ್ಯಾನ್ ಮುಖಾಂತರ ಪ್ರಧಾನಿ ಮೋದಿಯವರು ನಮ್ಮನ್ನು ಬ್ಯಾಂಕುಗಳ ಮುಂದೆ ಸರತಿಯ ಸಾಲಲ್ಲಿ ನಿಲ್ಲಿಸಿ ನಮ್ಮ ಕೈಯಲ್ಲಿದ್ದ 500 ಹಾಗೂ 1000 ರೂಪಾಯಿಗಳನ್ನು ತೆಗೆದು ನೀರವ್ ಮೋದಿಯ ಕಿಸೆಯನ್ನು ತುಂಬಿಸಿದ್ದಾರೆ ಎಂದು ರಾಹುಲ್ ಗಾಂಧಿ ಮೋದಿಯವರನ್ನು ಲೇವಡಿ ಮಾಡಿದ್ದಾರೆ.

ಎಟಿಎಮ್ ನಗದು ಇಲ್ಲದೆ ಖಾಲಿ ಖಾಲಿಯಾಗಿದೆ. ಹಣಕಾಸು ಸಚಿವ ಅರುಣ್ ಜೈಟ್ಲಿ ನಮ್ಮಲ್ಲಿ ಹಣದ ಕೊರತೆಯಿಲ್ಲ ಎನ್ನುತ್ತಾರೆ. ಮೋದಿ ಸಂಸತ್ತಿನಲ್ಲಿ ಎದ್ದು ನಿಂತು ಮಾತನಾಡಲೂ ಹೆದರುತ್ತಾರೆ ಎಂದರಲ್ಲದೇ ದೇಶದ ಬ್ಯಾಂಕುಗಳ ಇಂದಿನ ಸ್ಥಿತಿಗೆ ಮೋದಿಯವರೇ ನೇರ ಕಾರಣ ಎಣದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *