ಪತ್ನಿಯ ಅತಿಯಾದ ಫೇಸ್‌ಬುಕ್ ವ್ಯಾಮೋಹದಿಂದ ಬೇಸತ್ತ ಪತಿ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸುವುದು ಸಾಮಾನ್ಯ. ಆದರೆ ತಮ್ಮ ಪ್ರತಿನಿತ್ಯದ ಕಾಯ೯ಗಳ ನಂತರದ ಗಳಿಗೆಗೆ ಮೀಸಲು ಮಾತ್ರ. ಇದಕ್ಕೆ ತದ್ದವಿರುದ್ಧವಾಗಗಿರುವಂತೆ ಗುರುಗ್ರಾಮದ ಲಕ್ಷ್ಮಿ ಎಂಬ ಮಹಿಳೆ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್ ನ್ನು ಮಿತಿಮೀರಿ ಬಳಕೆ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪತಿ ಉಸಿರುಗಟ್ಟಿಸಿ ಸಾಯಿಸಿದ ಘಟನೆ ಕಳೆದ ಗುರುವಾರದಂದು ನಡೆದಿದೆ. ಕೊಲೆಯಾದ ಮಹಿಳೆ ಲಕ್ಷ್ಮಿ (32) ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕವರ ಜತೆ ಚಾಟಿಂಗ್‌ ಮಾಡುತ್ತ ಮನೆ ಮತ್ತು ಮಕ್ಕಳ ಬಗ್ಗೆ ಕಾಳಜಿವಹಿಸುವುದನ್ನೇ ಬಿಟ್ಟಿದ್ದಾಳೆ ಎಂದು ಆಕ್ರೋಶಗೊಂಡ ಆಕೆಯ ಪತಿ ಹರಿಓಂ (35) ಲಕ್ಷ್ಮಿ ನಿದ್ರಿಸುವುತ್ತಿರುವಾಗ ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ದಂಪತಿಗಳಿಗೆ 8 ವರ್ಷದ ಮಗಳು ಮತ್ತು 10 ವರ್ಷದ ಒಬ್ಬ ಮಗನಿದ್ದಾನೆ. 2006 ರಲ್ಲಿ ಮದುವೆಯಾದ ಇವರಲ್ಲಿ ಮೊದಲ ಕೆಲವು ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿತ್ತು. ಇತ್ತೀಚಿನ 2 ವರ್ಷಗಳಿಂದ ಲಕ್ಷ್ಮಿ ಮನೆ, ಮಕ್ಕಳು ಎಲ್ಲವನ್ನೂ ಮರೆತು ಮೊಬೈಲ್‌ ಫೋನ್‌ ಗೀಳಿನಲ್ಲೇ ಕಳೆದುಹೋದಳು. ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ, ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರಲಿಲ್ಲ, ಅವರಿಗೆ ಹೋಂ ವರ್ಕ್‌ ಮಾಡಲು ಹೇಳಿಕೊಡುತ್ತಿರಲಿಲ್ಲ. ಹಗಲೂ -ರಾತ್ರಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲೇ ಮುಳುಗಿರುತ್ತಿದ್ದಳು. ದಿನಗಳೆದಂತೆ ಪರಿಸ್ಥಿತಿ ತೀರಾ ಹದಗೆಟ್ಟಿತು. ಇದರ ದುಷ್ಪರಿಣಾಮ ಸ್ವರೂಪ ತಂದೆ ಇಬ್ಬರೂ ಮಕ್ಕಳನ್ನು ಕುರುಕ್ಷೇತ್ರದ ಬೋರ್ಡಿಂಗ್ ಶಾಲೆಗೆ ಸೇರಿಸಿದನು.

ಇದರಿಂದಾಗಿ ಮತ್ತಷ್ಟು ಹೆಚ್ಚು ಕಾಲ ಮೊಬೈಲ್ ನಲ್ಲಿ ತಲ್ಲೀಣಳಾಗಿರಲು ಪ್ರಾರಂಭಿಸಿದಳು. ಅವಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ನೋಡಲು ಪತಿಗೆ ಅವಕಾಶ ನೀಡುತ್ತಿರಲಿಲ್ಲ ಆ ಕಾರಣ ಬೇರೆ ಯಾರದೋ ಜತೆಗೆ ಸಂಬಂಧವಿರಬಹುದು ಎಂದು ಶಂಕಿಸಿದ ಪತಿ, ಪತ್ನಿಯ ಜೊತೆ ಜಗಳ ಆಡಿಕೊಂಡು, ಇನ್ನು ನಾನು ಇದನ್ನೆಲ್ಲ ಸಹಿಸಿಕೊಳ್ಳಲಾರೆ ಎಂದು ನಿರ್ಧರಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಲಕ್ಷ್ಮಿಯ ತಂದೆ ಬಲವಂತ್ ಸಿಂಗ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಶವದ ಬಳಿ ಹರಿಓಂ ಕುಳಿತಿದ್ದ. ಅಳಿಯ ಹರಿಓಂ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾನೆ. ಪೊಲೀಸರು ಆತನನ್ನು ಕೋರ್ಟಿಗೆ ಹಾಜರುಪಡಿಸಿದ್ದು, ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *