ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 8 ವರ್ಷ ಬಾಲಕಿಯ ಅತ್ಯಾಚಾರ ಮಾಡಿ ಕೊಲೆ!

ನ್ಯೂಸ್ ಕನ್ನಡ ವರದಿ : ದೇಶದಾದ್ಯಂತ ಆತಂಕ ಸೃಷ್ಟಿಸಿರುವ ಉತ್ತರಪ್ರದೇಶದ ಅತ್ಯಾಚಾರ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಈಗ ಮತ್ತೊಬ್ಬ 8 ವಷ೯ದ ಬಾಲಕಿಯೊಬ್ಬಳಿಗೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿರುವ ಘಟನೆ ಇಂದು ಘಟಿದಿದೆ.

ಶೀತಾಲ್ಪುರ್‌ ಪ್ರದೇಶದ ಮಂಡಿ ಸಮಿತಿಯಲ್ಲಿ ಭಾನುವಾರದಂದು ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಬಂದಿದ್ದ ಬಾಲಕಿಗೆ ಆಮಿಷ ಒಡ್ಡಿ ಅಪಹರಿಸಿ ಈ ಹೀನ ಕೃತ್ಯವೆಸಗಲಾಗಿದೆ. ಸೋಮವಾರದಂದು ಬಾಲಕಿಯ ಮೃತ ದೇಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ಅಖಿಲೇಶ್‌ ಕುಮಾರ್‌ ಚೌರಾಸಿಯಾ ರವರು ಮುಂಜಾಗ್ರತೆಯಾಗಿ ಘಟನಾ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಿದ್ದು, ಪ್ರಕರಣದ ಆರೋಪಿ ಸೋನು ಎಂಬಾತನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *