ಕೋಮುಗಳ ನಡುವೆ ವಿಷಬೀಜ ಬಿತ್ತುವವರು ಯೋಧರನ್ನು ನೋಡಿ ಕಲಿಯಿರಿ: ವೀರ ಯೋಧ ಝುಬೇರ್ ನೇರಂಕಿ

ನ್ಯೂಸ್ ಕನ್ನಡ ವರದಿ (17-04-2018): ಕೋಮುಗಳ ನಡುವೆ ವಿಷ ಬಿತ್ತುವವರು, ಭಾರತೀಯ ಯೋಧರನ್ನು ನೋಡಿ ಪಾಠ ಕಲಿಯಿರಿ ಎಂದು ಜಮ್ಮು ಕಾಶ್ಮೀರದಲ್ಲಿ ಲಷ್ಕರ್ ಉಗ್ರರನ್ನು ಸದೆಬಡಿದ ಸಿಆರ್ಪಿಎಫ್ ಯೋಧ ಝುಬೇರ್ ನೇರಂಕಿಯವರು ಹೇಳಿದ್ದಾರೆ. ಬಿ ಎಂ ಮಹಮ್ಮದ್ ಮದನಿ ಸ್ಮರಣಾರ್ಥ ಚೊಂಬುಗುಡ್ಡೆ ಪ್ರೇಂಡ್ಸ್, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ತನ್ನ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಝುಬೇರ್ ಈ ಮಾತನ್ನು ಹೇಳಿದರು.

ಕರಾವಳಿ ಕರ್ನಾಟಕದಲ್ಲಿ ಕೋಮು ಕೋಮು ಎಂದು ವಿಷ ಬಿತ್ತುವವರು, ಭಾರತ ದೇಶಕ್ಕಾಗಿ ಹಗಲಿರುಳು ಗಡಿ ಕಾಯುವ ಯೋಧರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ.  ಅಲ್ಲಿ ಯೋಧರಲ್ಲಿ ಹಲವು ಜಾತಿ ಧರ್ಮದವರಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತೇವೆ. ಈ ಸೌಹಾರ್ದ ಇಲ್ಲಿಗೂ ಅನ್ವಯಗೊಳ್ಳಲಿ ಎಂದು ಹೇಳಿದರು.

ನಂತರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ಪಿಎ ಇಂಜಿನಿಯರಿಂಗ್ ಕಾಲೇಜ್ ಪ್ರಿನ್ಸಿಪಾಲರಾದ ಡಾ.ಅಬ್ದುಲ್ ಶರೀಫ್ ನೆರವೇರಿಸಿದರು. ಚೆಂಬುಗುಡ್ಡೆ ಜುಮಾ ಮಸೀದಿ ಖತೀಬರಾದ ಸಿದ್ಧೀಕ್ ಅಹಸನಿ ದವಾಶಿರ್ವಚನ ಮಾಡಿದರು. ಡಾ.ಮುರಳಿ ಮೋಹನ್ ಚೊಂಟ್ಟಾರು ರಕ್ತದಾನದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜಿ ಅಬ್ದುಲ್ ರಶೀದ್, ಡಾ  ಯು ಟಿ ಇಫ್ತಿಕಾರ್ ,
ರೆ।ಫಾ।,ಬಾಝಿಲ್ ಡಿ ಸೋಜ,ಕುಮಾರ್ ಕೊಟಿಯನ್, ಸಿದ್ದೀಕ್ ಮಾಜೇಶ್ವರ, ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಮುಸ್ತಫ  ಕೆ ಸಿ ರೋಡ್, ಸಮೀರ್ ಕಡವಿನಬಾಗಿಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕರು ರಕ್ತದಾನ ಮಾಡಿ ಸಹಕರಿಸಿದರು.ಝಹೀರ್ ಶಾಂತಿನಗರ ವಂದಿಸಿದರು

Leave a Reply

Your email address will not be published. Required fields are marked *