ಮೂಡನಂಬಿಕೆಯನ್ನು ಮೆಟ್ಟಿ ನಿಂತು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆಲ್ಲುತ್ತಿರುವ ಕರ್ನಾಟಕದ ರಾಜಕಾರಣಿ ಇವರು!

ನ್ಯೂಸ್ ಕನ್ನಡ ವರದಿ(17-04-2018): ಚುನಾವಣೆ ಹತ್ತಿರ ಬರುತ್ತಿರುವಾಗ ರಾಜಕಾರಣಿಗಳು ಜ್ಯೋತಿಷಿಗಳ ಹತ್ತಿರ ಹೋಗಿ ತಾವು ನಾಮಪತ್ರ ಸಲ್ಲಿಸುವ ಗಳಿಗೆ ಹಾಗೂ ವಿಧಾನಗಳನ್ನು ಕೇಳಿ ತಿಳಿದುಕೊಳ್ಳುವುದರಲ್ಲಿ ಬ್ಯೂಸಿಯಾಗಿದ್ದರೆ, ಇದಕ್ಕೆಲ್ಲ ಅಪವಾದವೆಂಬಂತೆ ಈ ಶಿಷ್ಟಾಚಾರಗಳ ವಿರುದ್ಧ ನಡೆದುಕೊಳ್ಳುವ ರಾಜಕಾರಣಿಯೊಬ್ಬರಿದ್ದಾರೆ. ಅವರೇ ಸತೀಶ್ ಜಾರಕಿಹೊಳಿ.

ಬೆೊಳಗಾವಿಯ ಯಮಕನಕರಡಿ ಕ್ಷೇತ್ರದಿಂದ ಕಾಂಗ್ರೆಸ ಅಭ್ಯರ್ಥಿಯಾಗಿ ಸ್ಪರ್ದಿಸಲಿರುವ ಸತೀಶ್ ಜಾರಕಿಹೊಳಿ ಮೂಢನಂಬಿಕೆಯ ಪ್ರಬಲ ವಿರೋಧಿ. ನಾಮಪತ್ರ ಸಲ್ಲಿಸುವ ಗಳಿಗೆ ಹಾಗೂ ಮುಹರ್ತಗಳಿಗೆ ಬೆಲೆ ನೀಡುವವರಲ್ಲ. ಅಪಶಕುನವಾದ ರಾಹು ಕಾಲದಲ್ಲೇ ಹೋಗಿ ನಾಮಪತ್ರ ಸಲ್ಲಿಸುತ್ತಾರೆ. ನಾಮಪತ್ರ ಸಲ್ಲಿಸುವಾಗ ಸಭೆ ಮೆರವಣಿಗೆಗಳೂ ಇಲ್ಲ, ಕೇವಲ ಐದು ಮಂದಿ ಮಾತ್ರ ನಾಮಪತ್ರ ಸಲ್ಲಿಸುವ ಸಮಯ ಇವರ ಜೊತೆ ಹೋಗುತ್ತಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಈ ಪ್ರಯೋಗದಲ್ಲಿ ಯಶಸ್ವಿಯಾದ ಜಾರಕಿಹೊಳಿ 24,350 ಮತಗಳ ಅಂರದಿಂದ ಜಯಗಳಿಸಿದ್ದರು. ಈ ಸಲದ ಚುನಾವಣೆಯಲ್ಲೂ ಜಾರಕಿಹೊಳಿ ತನ್ನ ಈ ಪ್ರಯೋಗದಲ್ಲಿ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *