ಉತ್ತರ ಪ್ರದೇಶ: ಭೀಮ್ ಸೇನೆಯಿಂದ ದಲಿತರಿಗಾಗಿ ಭೀಮ್ ಪಾಠ ಶಾಲೆಗಳು!
ನ್ಯೂಸ್ ಕನ್ನಡ ವರದಿ(17-04-2018): ಉತ್ತರ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಬ್ಯಗಳ ಕೊರತೆಯಿಂದಾಗಿ ದಲಿತರ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯದ ಹಿನ್ನಲೆಯಲ್ಲಿ ದಲಿತರ ಏಳಿಗೆಗಾಗಿ ದುಡಿಯುತ್ತಿರುವ ಭೀಮ್ ಸೇನೆಯು, ರಾಜ್ಯಾದ್ಯಂತ 1000 ಕ್ಕೂ ಅಧಿಕ ಭೀಮ್ ಪಾಠ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ.
2015ರಲ್ಲಿ ಶಹರಾನ್ ಪುರದಲ್ಲಿ ಪ್ರಾಯೋಗಿಕವಾಗಿ ಸ್ಥಾಪನೆಯಾಗಿದ್ದ ಭೀಮ್ ಪಾಠ ಶಾಲೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಸುಮಾರು ಸಾವಿರಕ್ಕೂ ಅಧಿಕ ಪಾಠ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಶಹರಾನ್ ಪುರ ಭೀಮ್ ಆರ್ಮಿಯ ಅಧ್ಯಕ್ಷ ಕಮಲ್ ವಾಲಿಯ ತಿಳಿಸಿದ್ದಾರೆ.
ದಲಿತರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದ್ದು, ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸಲುವಾಗಿ ಭೀಮ್ ಪಾಠ ಶಾಲೆಗಳನ್ನು ಸ್ಥಾಪಿಸಲಾಗುವುದೆಂದು ಅವರು ಹೇಳಿದರು.