ಆರ್ಸಿಬಿ ಅಭಿಮಾನಿಗಳಿಗೆ ಪಂದ್ಯ ಆರಂಭಕ್ಕೂ ಮುನ್ನ ಎಬಿಡಿ ನೀಡಿದ ಸಂದೇಶವೇನು ಗೊತ್ತೇ? ವೀಡಿಯೋ ವೀಕ್ಷಿಸಿ
ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ಈಗಾಗಲೇ ಶುರುವಾಗಿದೆ. ಟೂರ್ನಿಯಲ್ಲೇ ಅತ್ಯಂತ ಉತ್ತಮ ತಂಡ ಹೊಂದಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ.. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ತವರಿನಲ್ಲಿ ಕಳೆದ ಪಂದ್ಯದಲ್ಲಿ ಮುಗ್ಗರಿಸಿದ್ದ ಆರ್’ಸಿಬಿ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದ್ದರೆ, ಮುಂಬೈ ಇಂಡಿಯನ್ಸ್ ಸತತ ಮೂರು ಸೋಲು ಕಂಡಿದ್ದು, ಇಂದು ತವರಿನಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಇಂದಿನ ಪಂದ್ಯದಲ್ಲಿ ನೂರು ಪ್ರತಿಶತ ಉತ್ತಮ ಪ್ರದರ್ಶನ ತೋರುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅವರ ಕಣ್ಣುಗಳಲ್ಲೇ ತಂಡ ಗೆಲ್ಲುವ ಹುಮ್ಮಸ್ಸು ಕಾಣುತ್ತಿತ್ತು.
ವೀಡಿಯೋ ವೀಕ್ಷಿಸಿ.
You can see the determination in @ABdeVilliers17 eyes. The boys will be putting in their 100% for today's match! #MIvRCB #PlayBold #RCB pic.twitter.com/osux9K1An5
— Royal Challengers Bangalore (@RCBTweets) April 17, 2018