ಪ್ರಧಾನಿ ನರೇಂದ್ರ ಮೋದಿಯೇ ಆರೆಸ್ಸೆಸ್ ನ ಮೋಹನ್ ಭಾಗ್ವತ್ ರನ್ನು ಕೊಲ್ಲಿಸುತ್ತಾರೆ: ಮುತಾಲಿಕ್
ನ್ಯೂಸ್ ಕನ್ನಡ ವರದಿ-(17.04.18): ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರನ್ನು ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ದೂರವಿಟ್ಟಿದ್ದು, ಮುತಾಲಿಕ್ ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮಾತ್ರವಲ್ಲದೇ ಮುಂದಿನ ಚುನಾವಣೆಯಲ್ಲಿ ಶಿವಸೇನೆಯನ್ನು ಪ್ರತಿನಿಧಿಸಿ ಸ್ಪರ್ಧಿಸಲಿದ್ದಾರೆ. ಇದೀಗ ಮತ್ತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಮುತಾಲಿಕ್, ಆರೆಸ್ಸೆ ಮುಖ್ಯಸ್ಥ ಮೋಹನ್ ಭಾಗವತ್ ರನ್ನೂ ನರೇಂದ್ರ ಮೊದಿ ಕೊಲ್ಲಿಸುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಹಿಂದೂಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರವೀಣ್ ಭಾಯ್ ತೊಗಾಡಿಯಾರಿಗೆ ಬೆಂಬ ಸೂಚಿಸಿ ಇಂದು ಮುತಾಲಿಕ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ದಾಹಕ್ಕೆ ಈಗಾಗಲೇ ಹಿಂದುತ್ವದ ಹೋರಾಟಗಾರ ಪ್ರವೀಣ್ ಭಾಯ್ ತೊಗಾಡಿಯಾ ಬಲಿಯಾಗಿದ್ದಾರೆ. ಇನ್ನು ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ರನ್ನೂ ನರೇಂದ್ರ ಮೋದಿಯೇ ಕೊಲ್ಲಿಸುತ್ತಾರೆ”
ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿ, ರಾಮಮಂದಿರವನ್ನು ಕಟ್ಟಿಸಬೇಕೆಂದು ಆಗ್ರಹಿಸುವ ಹಿಂದುತ್ವ ಹೊರಾಟಗಾರರನ್ನು ದಮನಿಸಲು ಪ್ರಯತ್ನಿಸುತ್ತಿದ್ದಾರೆ. ಗೋಮಾಂಸ ನಿಷೇಧ ಬಿಡಿ, ಗೋಮಾಂಸ ರಫ್ತಿನ ಪ್ರಮಾಣವನ್ನು ಕೂಡಾ ಇಳಿಕೆ ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಅತ್ತ ಕೇಂದ್ರದಲ್ಲಿ ರಾಮಮಂದಿರದ ಹೆಸರಿನಲ್ಲಿ ಅಧಿಕಾರ ಹಿಡಿಯಲು ನೋಡುತ್ತಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ದತ್ತಪೀಠದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯಷ್ಟು ನೀಚ ಪ್ರಧಾನಿ ಇನ್ನೊಬ್ಬರಿಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.