ರೋಹಿತ್ ಶರ್ಮಾ, ಲೇವಿಸ್ ಅರ್ಧಶತಕ: ಆರ್ಸಿಬಿ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಮುಂಬೈ ತಂಡ!

ನ್ಯೂಸ್ ಕನ್ನಡ ವರದಿ-(17.04.18): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಪಂದ್ಯವು ನಡೆಯುತ್ತಿದೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿದ್ದು, ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು ನಾಯಕ ರೋಹಿತ್ ಶರ್ಮಾ ಹಾಗೂ ಇವಿನ್ ಲೇವಿಸ್ ಅರ್ಧಶತಕದ ಸಹಾಯದೊಂದಿಗೆ 20 ಓವರ್ ಗಳಲ್ಲಿ 213 ರನ್ ಪೇರಿಸಿದೆ.

ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಮೊದಲ ಎರಡು ಎಸೆತಗಳಲ್ಲಿ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಪ್ರಥಮ ಓವರ್ ಎಸೆದ ಉಮೇಶ್ ಯಾದವ್ ಮೊದಲ ಎರಡು ಎಸೆತಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಇಶನ್ ಕಿಶನ್ ರ ವಿಕೆಟ್ ಪಡೆದರು. ಬಳಿಕ ಲೇವಿಸ್ (65) ಹಾಗೂ ರೋಹಿತ್ ಶರ್ಮಾ(94) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಇವರಿಬ್ಬರ ಅರ್ಧ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ 213 ರನ್ ಪೇರಿಸಿತು.

Leave a Reply

Your email address will not be published. Required fields are marked *