‘ನಾಯಿ, ಬೆಕ್ಕು’ ರಾಜಕೀಯವು ಪ್ರಜಾಪ್ರಭುತ್ವವನ್ನು ಅವನತಿಯೆಡೆಗೆ ಕೊಂಡೊಯ್ಯಲಿದೆ: ರಾಜ್ ದೀಪ್ ಸರ್ದೇಸಾಯಿ

ನ್ಯೂಸ್ ಕನ್ನಡ ವರದಿ(07-04-2018):ಇಂದು ದೇಶದಲ್ಲಿ ನಡೆಯುತ್ತಿರುವ ‘ಕುತ್ತ ಬಿಲ್ಲಿ’ ರಾಜಕೀಯವು ನಮ್ಮ ಪ್ರಜಾಪ್ರಭುತ್ವವನ್ನು ಅವನತಿಯೆಡೆಗೆ ಕೊಂಡೊಯ್ಯಲಿದೆ ಎಂದು ಇಂಡಿಯಾ ಟುಡೇ ಗ್ರೂಪಿನ ಸಂಪಾದಕ ಸಲಹೆಗಾರನಾದ ರಾಜ್ ದೀಪ್ ಸರ್ದೇಸಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಂಡಿಯಾ ಟುಡೇ ಟೆಲಿವಿಷನ್ ನಲ್ಲಿ ‘ಮೈ ಟೇಕ್’ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ಮೋದಿ ಪ್ರಹಾವನ್ನು ಎದುರಿಸಲು ದೇಶದಲ್ಲಿ ನಾಯಿ ಬೆಕ್ಕುಗಳು ಒಂದಾಗಿವೆ. ತಮ್ಮ ಕಾಲಡಿಗೆ ನೀರು ಬಂದಾಗ ಈ ನಾಯಿ, ಬೆಕ್ಕು, ನವಿಲು, ಚೀತಾ ಹಾಗೂ ಮುಂಗುಸಿಗಳು ಸಂಘಟಿತವಾಗಿದೆ ಎಂದು ಮೋದಿ ಸರಕಾರದ ವಿರುದ್ಧ ಸಂಘಟಿತರಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ಟೀಕೆ ಮಾಡಿದ್ದರು. ಅಮಿತ್ ಷಾರ ಈ ಮಾತುಗಳನ್ನು ತೀವೃವಾಗಿ ಖಂಡಿಸಿದ ಸರ್ದೇಸಾಯಿ, ಅಮಿತ್ ಷಾ ರವರು ರಾಜಕೀಯದಲ್ಲಿ ಪ್ರಬುದ್ಧರಾಗಬೇಕಿದೆ. ಪ್ರತಿಪಕ್ಷಗಳನ್ನು ವಿರೋಧಿಗಳಂತೆ ಪರಿಗಣಿಸುತ್ತಿರುವ ನಿಮ್ಮ ಮನಸ್ಥಿತಿಯು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಪ್ರತಿಪಕ್ಷಗಳು ನಿಮ್ಮ ಸಹವರ್ತಿಗಳು ಎಂಬ ಮನೋಭಾವನೆಯು ನಿಮ್ಮಲ್ಲಿ ಮೂಡಬೇಕಿದೆ ಎಂದರು.

ನೀವು ಜವಾಹಾರ್ ಲಾಲ್ ನೆಹರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರಂತಹ ರಾಜಕಾರಣಿಗಳಿಂದ ಬಹಳಷ್ಟು ಕಲಿಯಬೇಕಿದೆ. ಅವರ ರಾಜಕೀಯ ಇತಿಹಾಸದಲ್ಲಿ ಇಂತಹ ಭಾಷೆಯನ್ನು ಅವರು ಬಳಸಿರುವುದು ಕಾಣಲು ಸಿಗಲು ಸಾಧ್ಯವಿಲ್ಲ ಎಂದು ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ.

Leave a Reply

Your email address will not be published. Required fields are marked *