ಪ್ರತಿ ಅನಿವಾಸಿ ಕನ್ನಡಿಗನೂ ತಿಳಿಯಲೇಬೇಕಾದ ‘NRK ಕಾರ್ಡ್’ ಬಗ್ಗೆ ಸಂಪೂರ್ಣ ಮಾಹಿತಿ! ವೀಡಿಯೋ ವೀಕ್ಷಿಸಿ
ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಪ್ರಪಂಚದಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ನೋಂದಣಿ ಮತ್ತು ವಿಶೇಷ ಗುರುತಿನ ಚೀಟಿಯನ್ನು (NRK Card) ನೀಡುವ ವ್ಯವಸ್ಥೆಯನ್ನು ಜಾರಿ ಗೊಳಿಸಿದೆ.
ಈ NRK ಕಾರ್ಡ್ ಕುರಿತು ಯುಎಇಯಲ್ಲಿರುವ ಪ್ರತಿಯೊಬ್ಬ ಅನಿವಾಸಿ ಕನ್ನಡಿಗರಿಗೂ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಯುಎಇ ಘಟಕದ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪ್ರಭಾಕರ್ ಅಂಬಲ್ತೆರೆ ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಸಾಧ್ಯವಾದಷ್ಟು ಪ್ರತಿ ಅನಿವಾಸಿ ಕನ್ನಡಿಗನಿಗೂ ತಲುಪಿಸಲು ಪ್ರಯತ್ನಿಸಿ..
ಈಗಾಗಲೇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಘಟಕದ ವತಿಯಿಂದ ಯುಎಇಯಲ್ಲಿ ಸಕ್ರಿಯವಾಗಿ NRK ಕಾರ್ಡ್ ನೊಂದಾವಣಿ ಪ್ರಾರಂಭವಾಗಿದ್ದು, ಈ ಕಾರ್ಡ್ ನೊಂದಾವಣೆ ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನೂ ಮಾಡಬಹುದಾಗಿದೆ ಮತ್ತು ಆ ಮೂಲಕ ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರಿಗೆ ನೀಡಿರುವ ಸೌಲಭ್ಯ ಸವಲತ್ತುಗಳನ್ನು ಪಡೆಯಬಹುದು..
ತಪ್ಪದೇ ವೀಡಿಯೋ ವೀಕ್ಷಿಸಿ..