ಮುಂಬೈ ವಿರುದ್ಧ ಹೀನಾಯ ಸೋಲು: ಮುಂದುವರಿದ ಆರ್ಸಿಬಿ ಸೋಲಿನ ಸರಣಿ!

ನ್ಯೂಸ್ ಕನ್ನಡ ವರದಿ-(17.04.18): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಪಂದ್ಯವು ನಡೆದಿದ್ದು, ಮುಂಬೈ ಇಂಡಿಯನ್ಸ್ ತಂಡ ನೀಡಿದ 213 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ತಂಡವು ಕೇವಲ 167/8 ರನ್ ಗಳಿಸುವ ಮೂಲಕ ಸೋಲನ್ನಪ್ಪಿಕೊಂಡಿದೆ.

ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ರಾಯಲ್ ಚಾಲೆಂಜರ್ಸ್ ತಂಡವು ಆರಂಬದಲ್ಲಿ ಉತ್ತಮ ಪ್ರದರ್ಶನ ತೋರಿದರೂ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ನಾಯಕ ವಿರಾಟ್ ಕೊಹ್ಲಿ(92) ಮಾತ್ರ ಉತ್ತಮ ಪ್ರದರ್ಶನವನ್ನು ತೋರಿದ್ದು, ಸೋಲಿನ ಸುಳಿಯಲ್ಲಿದ್ದ ತಂಡವನ್ನು ಪಾರು ಮಾಡಲು ಪ್ರಯತ್ನಿಸಿದರು. ಎಬಿಡಿ ವಿಲಿಯರ್ಸ್, ಕೋರಿ ಆಂಡರ್ಸನ್, ಸರ್ಫರಾಝ್ ಖಾನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಒಂದಂಕೆ ಗಳಿಸಿ ಔಟಾದರು. ಕೊನೆಗೆ ಎಷ್ಟೇ ಹರಸಾಹಸಪಟ್ಟರೂ 20 ಓವರ್ ಗಳ್ಲಲಿ ಕೇವಲ 167 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಆರ್ಸಿಬಿ ತಂಡವು ತನ್ನ ಸೋಲಿನ ಸರಣಿಯನ್ನು ಮುಂದುವರಿಸಿದೆ.

Leave a Reply

Your email address will not be published. Required fields are marked *