ಸೈನಿಕರು ಸುರಕ್ಷಿತವಾಗಿಲ್ಲ, ಮಹಿಳೆಯರಿಗೆ ರಕ್ಷಣೆ ಇಲ್ಲ, ಪ್ರಧಾನಿ ವಿದೇಶ ಪ್ರವೇಶದಲ್ಲಿದ್ದಾರೆ: ತೊಗಾಡಿಯಾ ಕಿಡಿ

ನ್ಯೂಸ್ ಕನ್ನಡ ವರದಿ-(18.04.18): ವಿಶ್ವ ಹಿಂದೂ ಪರಿಷತ್ ನ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಕಳೆದ ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮತ್ತೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ತೊಗಾಡಿಯಾ, ದೇಶದಲ್ಲಿ ಗಡಿ ಕಾಯುವ ಸೈನಿಕರು ಸುರಕ್ಷಿತರಾಗಿಲ್ಲ, ಇನ್ನೊಂದೆಡೆ ಮಹಿಳೆಯರಿಗೆ ಕೂಡಾ ರಕ್ಷಣೆ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ, ಸ್ವೀಡನ್‌ ಮತ್ತು ಇಂಗ್ಲೆಂಡ್‌ಗೆ ಐದು ದಿನಗಳ ಪ್ರವಾಸಕ್ಕೆ ಸೋಮವಾರ ತೆರಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ, ಮಂಗಳವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ. ತೊಗಾಡಿಯಾ ಅವರನ್ನು ಬೆಂಬಲಿಸಿ ದೇಶದಾದ್ಯಂತ ಜಿಲ್ಲಾ ಮಟ್ಟದ ಸುಮಾರು 5 ಸಾವಿರ ಕಾರ್ಯಕರ್ತರು ವಿಎಚ್‌ಪಿ ತೊರೆದಿದ್ದಾರೆ’ ಎಂದು ವಿಎಚ್‌ಪಿಯ ಗುಜರಾತ್‌ ಘಟಕದ ವಕ್ತಾರ ಜಯ್‌ ಷಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *