ಐಪಿಎಲ್ ನ ಪ್ರತೀ ಪಂದ್ಯಾಟಕ್ಕೆ ವೀಕ್ಷಕ ವಿವರಣೆಗಾರರು ಪಡೆಯುವ ಸಂಭಾವಣೆ ಎಷ್ಟು ಗೊತ್ತೇ?

ನ್ಯೂಸ್ ಕನ್ನಡ ವರದಿ(0704-2018): 2018ನೇ ಆವೃತಿಯ ಐಪಿಎಲ್ ಪಂದ್ಯಾವಳಿಯು ಇಂದಿನಿಂದ ಆರಂಭವಾಗಲಿದ್ದು, ಪ್ರತೀ ಪಂದ್ಯಗಳಲ್ಲಿ ಆಟಗಾರರು ಪಡೆಯುವ ಸಂಭಾವಣೆಗಿಂತ ವೀಕ್ಷಕ ವಿವರಣೆಗಾರರು ಪಡೆಯುವ ಸಂಭಾವಣೆಯು ಬಹಳಷ್ಟು ಅಧಿಕವಾಗಿದೆ.

ಈ ಬಾರಿಯ ಐಪಿಎಲ್ ಪಂದ್ಯಾಟ ಕಾಮೆಂಟರಿ ಇಂಗ್ಲೀಷ್, ಹಿಂದಿ, ಬೆಂಗಾಲಿ, ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಒಟ್ಟು 6 ವಿವಿಧ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಅದರಂತೆ ಕಾಮೆಂಟ್ರಿಗಾರರ ಸಂಖ್ಯೆಯನ್ನು ಹೆಚ್ಚಿಸಿದ್ದು, ಸಂಭಾವನೆ ಕೂಡ ಹೆಚ್ಚಿಸಲಾಗಿದೆ. 70 ಕೋಟಿ ವೀಕ್ಷಕರನ್ನು ಗಮನ ಸೆಳೆಯುವ ಉದ್ದೇಶದಿಂದ ವಿವಿಧ ಭಾಷೆಗಳ ವೀಕ್ಷಕ ವಿವರಣೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಒಟ್ಟು 100 ಮಂದಿ ಕಾಮೆಂಟರ್ಸ್​​​​ಗಳಿದ್ದಾರೆ. ಇದರಲ್ಲಿ ಇಂಗ್ಲೆಂಡ್​ ತಂಡದ ಮಾಜಿ ನಾಯಕರಾದ ಕೆವಿನ್ ಪೀಟರ್ಸೆನ್, ಮೈಕೆಲ್ ವಾನ್ ಮತ್ತು ನಾಸಿರ್ ಹುಸೇನ್ ಪ್ರಮುಖ ಆಕರ್ಷಣೆ. ಭರ್ಜರಿ ಸಂಭಾವನೆ ಪಡೆಯಲಿರುವ ಸುನೀಲ್ ಗಾವಸ್ಕರ್ ಸೇರಿದಂತೆ 7 ಭಾರತೀಯ ಕಾಮೆಂಟರ್ಸ್​​​ಗಳಿದ್ದಾರೆ.

ಮೂಲಗಳ ಪ್ರಕಾರ, ಪ್ರತಿ ಕಾಮೆಂಟರ್ಸ್​​ಗಳು ಒಂದು ಪಂದ್ಯಕ್ಕೆ ಸುಮಾರು 1.7 ಲಕ್ಷ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅನುಭವಿ ಕಮೆಂಟರ್​ಗಳ ಸಂಭಾವನೆ ಉಳಿದವರ ಸಂಭಾವನೆಗಿಂತ ದುಪ್ಪಟ್ಟಿರಲಿದೆಯಂತೆ.

Leave a Reply

Your email address will not be published. Required fields are marked *