ನನ್ನ ಸರಕಾರವು ಸಂಪೂರ್ಣ ಭಾರತವನ್ನೇ ಪರಿವರ್ತನೆ ಮಾಡಲಿದೆ: ನರೇಂದ್ರ ಮೋದಿ

ನ್ಯೂಸ್ ಕನ್ನಡ ವರದಿ-(18.04.18): ಭಾರತದಲ್ಲಿ ಅತ್ಯಾಚಾರ, ಆರ್ಥಿಕ ಮುಗ್ಗಟ್ಟು ಮುಂತಾದ ಗಂಭೀರ ಸಮಸ್ಯೆಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ. ಇದೀಗ ಸ್ವೀಡನ್ ದೇಶದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂಪೂರ್ಣ ಭಾರತವನ್ನು ನನ್ನ ಸರಕಾರವು ಪರಿವರ್ತನೆ ಮಾಡಲಿದೆ ಎಂದು ಹೇಳಿದ್ದಾರೆ. ಸ್ವೀಡನ್ ನ ಸ್ಟಾಕ್ ಹೋಮ್ ವಿಶ್ವವಿದ್ಯಾಲಯದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ನಾವು ಅಧಿಕಾರಕ್ಕೆ ಬಂದ ಬಳಿಕ ವಿಶ್ವಮಟ್ಟದಲ್ಲೇ ಬಾರತದ ಕುರಿತಾದಂತೆ ನಂಬಿಕೆ ಮತ್ತು ವಿಶ್ವಾಸವು ಹೆಚ್ಚಾಗಿದೆ. ನಮ್ಮ ಸರ್ಕಾರವು ದೇಶವನ್ನು ಸುಧಾರಣೆ ಮಾಡಬೇಕೆಂದು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಭಾರತವನ್ನು ಪರಿವರ್ತನೆ ಮಾಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ಒಂದು ದೊಡ್ಡ ಬದಲಾವಣೆಯ ಮೂಲಕ ಸಾಗುತ್ತಿದೆ. ಭಾರತದ ವರ್ಚಸ್ಸು, ಸ್ವಾಭಿಮಾನ ಹಾಗೂ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *