ಸುಳ್ಳುಸುದ್ದಿಗಳನ್ನು ಹರಡಲು ಬಿಜೆಪಿಗೆ ಸಾಮಾಜಿಕ ತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ: ರಮ್ಯಾ

ನ್ಯೂಸ್ ಕನ್ನಡ ವರದಿ-(18.04.18): ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಸಾಮಾಜಕಿ ಜಾಲತಾಣಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧ ನೀತಿಗಳ ಕುರಿತಾದಂತೆ ರಮ್ಯಾ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಖಾಸಗಿ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ರಮ್ಯಾ ” ಸುಳ್ಳುಸುದ್ದಿಗಳನ್ನು ಹರಡಲು ಬಿಜೆಪಿಗೆ ಸಾಮಾಜಿಕ ತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಖಾಸಗಿ ಮಾಧ್ಯಮವಾದ ಡಿಎನ್’ಎಗೆ ನೀಡಿದ ಸಂದರ್ಶನದಲ್ಲಿ, ಕರ್ನಾಟಕದಲ್ಲಿ ಸುಳ್ಳುಸುದ್ದಿ ಹರಡುವಿಕೆಯು ಗಂಭೀರ ಸಮಸ್ಯೆಯಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, “ಸುಳ್ಳುಸುದ್ದಿಗಳನ್ನು ಹರಡಲು ಬಿಜೆಪಿಗೆ ಸಾಮಾಜಿಕ ತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ನರೇಂದ್ರ ಮೊದಿ ಅಧಿಕಾರಕ್ಕೆ ಬಂದಿದ್ದೇ ಸುಳ್ಳುಸುದ್ದಿಗಳನ್ನು ಹರಡುವ ಮೂಲಕ ಎಂದು ಅವರು ಕಿಡಿಕಾರಿದ್ದಾರೆ. ಈ ಕುರಿತಾದಂತಹ ಸಂಪೂರ್ಣ ಲೇಖನವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *