ಕಾಮನ್ ವೆಲ್ತ್ ಪದಕ ವಿಜೇತೆಯ ಲಗೇಜ್ ತಡೆಹಿಡಿದ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು!
ನ್ಯೂಸ್ ಕನ್ನಡ ವರದಿ(18-04-2018): ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತೆಯಾದ ಭಾರತದ ಟೇಬಲ್ ಟೆನ್ನಿಸ್ ತಾರೆ ಮೌಮಾ ದಾಸ್ ಅವರ ಲಗೇಜ್ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದಿದ್ದು, ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ.
Zಆಸ್ಟ್ರೇಲಿಯಾದಿಂದ ಪದಕ ವಿಜೇತೆಯಾಗಿ ತವರೂರಿಗೆ ಮರಳಿದ ಮೌಮಾ ದಾಸ್ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಮೌಮಾ ದಾಸ್ ಅವರ ಲಗೇಜ್ ತಪಾಸಣೆಯ ವೇಳೆ ಸೂಕ್ತ ದಾಖಲೆಗಳಿಲ್ಲದ ಕಾರಣ ಲಗೇಜನ್ನು ತಡೆಹಿಡಿದಿದ್ದಾರೆ.
ಇದರ ವಿರುದ್ಧ ಟ್ವಿಟ್ಟರ್ ನಲ್ಲಿ ತೀವೃ ಆಕ್ರೋಶ ವ್ಯಕ್ತಪಡಿಸಿದ ಮೌಮಾ ದಾಸ್, ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಕ್ರೀಡಾ ಇಲಾಖೆಗೆ ದೂರು ಸಲ್ಲಿಸಿದ್ದರು. ಮೌಮಾ ದಾಸ್ ದೂರಿಗೆ ಪ್ರತಿಕೃಯಿಸಿದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಕಸ್ಟಮ್ಸ್ ಅಧಿಕಾರಿಗಳಿಗೆ ಮೌಮದಾಸ್ ಅವರ ಲಗೇಜನ್ನು ಶೀಘ್ರ ಮರಳಿಸುವಂತೆ ಸೂಚನೆ ನೀಡಿದ್ದಾರೆ.