ಇಂಟರ್ನೆಟ್ ಹೊಸದೇನಲ್ಲ; ಮಹಾ ಭಾರತ ಕಾಲದಲ್ಲಿಯೇ ಯುದ್ಧದ ಮಾಹಿತಿ ರವಾನಿಸಲು ಬಳಸಲಾಗಿತ್ತು: ತ್ರಿಪುರಾ ಮುಖ್ಯಮಂತ್ರಿ !
ನ್ಯೂಸ್ ಕನ್ನಡ ವರದಿ(18-04-2018): ಇಂಟರ್ನೆಟ್ ಆಧುನಿಕ ಕಾಲದ ಬೆಳವಣಿಗೆಯಲ್ಲ ಅದು ಮಹಾ ಭಾರತದ ಕಾಲದಲ್ಲಿಯೇ ಯುದ್ಧದ ಮಾಹಿತಿಗಳನ್ನು ತಿಳಿಯಲು ಬಳಸಲಾಗುತ್ತಿತ್ತು ಎಂದು ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಸ್ವಾರಸ್ಯಕರ ಮಾಹಿತಿ ಹೊರಹಾಕಿದ್ದಾರೆ.
ಅಂಧ ರಾಜನಾಗಿದ್ದ ದೃತರಾಷ್ಟ್ರನು ಮಹಾಭಾರತ ಕಾಲದಲ್ಲಿ ತನ್ನ ದೂತ ಸಂಜಯ್ ಎಂಬವನಿಂದ ಯುದ್ಧದ ಕ್ಷಣಕ್ಷಣದ ಮಾಹಿತಿಗಳನ್ನು ತಿಳಿಯುತ್ತಿದ್ದನು. ಇದು ತಂತ್ರಜ್ಞಾನದ ಬೆಳವಣಿಗೆ ಆ ಕಾಲದಲ್ಲಿಯೇ ಆಗಿತ್ತು ಎಂಬುವುದಕ್ಕೆ ಉದಾಹರಣೆಯಾಗಿದೆ ಎಂದು ವಿಪ್ಲಬ್ ದೇಬ್ ಹೇಳಿದ್ದಾರೆ.
ತ್ರಿಪುರಾದಲ್ಲಿ 25 ವರ್ಷಗಳ ಎಡರಂಗದ ಆಡಳಿತಕ್ಕೆ ಪೂರ್ಣವಿರಾಮ ಹಾಕಿ ಆರ್ಎಸ್ಎಸ್ ಪ್ರಚಾರಕರಾದ ವಿಪ್ಲಬ್ ದೇಬ್ ಕೆಲವೇ ತಿಂಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.