ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ: ವಿವಾದ

ನ್ಯೂಸ್ ಕನ್ನಡ ವರದಿ-(18.04.18): ನೆರೆಯ ರಾಜ್ಯ ತಮಿಳುನಾಡಿನ ರಾಜ್ಯಪಾಲರಾದ ಭನ್ವರಿಲಾಲ್ ಪುರೋಹಿತ್ ರವರು ತಮಗೆ ಪ್ರಶ್ನೆ ಕೇಳಿದ ಪತ್ರಕರ್ತೆಯ ಕೆನ್ನೆಯನ್ನು ಬಹಿರಂಗವಾಗಿ ಸವರಿದ್ದು, ಸದ್ಯ ವಿವಾದಕ್ಕೆ ಗ್ರಾಸವಾಗಿದ್ದಾರೆ. ರಾಜ್ಯಪಾಲ ಹುದ್ದೆಯು ಘನ ಮತ್ತು ಗಾಂಭೀರ್ಯ ಹುದ್ದೆಯಾಗಿದ್ದು, ಅವರು ಈ ರೀತಿಯ ವರ್ತನೆ ತೋರಿರುವುದು ಸರಿಯಲ್ಲ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ರಾಜ್ಯಪಾಲರು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದ್ದಾರೆ.

ಮಂಗಳವಾರ ರಾತ್ರಿ ಪುರೋಹಿತ್‌ ಅವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿದ್ದ ಪ್ರಾಧ್ಯಾಪಕನೋರ್ವನ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದು ಈ ವೇಳೆ ಘಟನೆ ನಡೆದಿದೆ. ಪ್ರಸಿದ್ದ ವಾರ ಪತ್ರಿಕೆಯ ವರದಿಗಾರ್ತಿ ಲಕ್ಷ್ಮೀ ಸುಬ್ರಮಣ್ಯನ್‌ ಅವರು ಪ್ರಶ್ನೆಯೊಂದನ್ನು ಕೇಳಿದ್ದು ಈ ವೇಳೆ ಉತ್ತರ ನೀಡುವುದನ್ನು ಬಿಟ್ಟು ಕೆನ್ನೆಯನ್ನು ಸವರಿದ್ದಾರೆ. ಈ ಬಗ್ಗೆ ಲಕ್ಷ್ಮೀ ಅವರು ಟ್ವೀಟರ್‌ನಲ್ಲಿ ಪ್ರಕಟಿಸಿ ಅಸಮಾಧಾನವನ್ನು ಹೊರ ಹಾಕಿದ್ದರು. ಪುರೋಹಿತ್‌ ಅವರಿಗೆ ಸಾಮಾಜಿಕ ತಾಣದಲ್ಲಿ ಹಲವರು ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದು ಇದು ಗುಡ್‌ ಟಚ್‌, ದುರುದ್ದೇಶದಿಂದ ಕೂಡಿರಲ್ಲಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *