ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ನಲ್ಲೂ ಪ್ರತಿಧ್ವನಿಸಿದ ಆಸಿಫಾ ಹತ್ಯೆ ಪ್ರಕರಣ!

ನ್ಯೂಸ್ ಕನ್ನಡ ವರದಿ(18-04-2018): ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಆಸಿಫಾ ಪ್ರಕರಣವನ್ನು ಮುಂದಿಟ್ಟು ಭಾರತವನ್ನು ವಿಶ್ವ ನಾಯಕರೆದುರು ತಲೆತಗ್ಗಿಸುವಂತೆ ಮಾಡುವ ಪಾಕಿಸ್ತಾನದ ಕುತಂತ್ರವು ಬುಡಮೇಲಾಗಿದೆ. ಪಾಕಿಸ್ತಾನದ ಸಂಸದನೊಬ್ಬ ಆಸಿಫಾ ಪ್ರಕರಣವನ್ನು ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ಮುಂದೆ ಪ್ರಸ್ತಾಪಿಸಿದ್ದು, ಆದರೆ ಅದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಪಾಕ್ ಶಡ್ಯಂತ್ರವು ಫಲಕಾರಿಯಾಗಲಿಲ್ಲ.

ಬ್ರಿಟನ್ ಸಂಸತ್ತಿನಲ್ಲಿ ಪಾಕಿಸ್ತಾನ ಮೂಲದ ಪ್ರತಿನಿಧಿ ಲಾರ್ಡ್ಸ್ ಅಹ್ಮದ್ ಎಂಬವರು ಪ್ರಕರಣವನ್ನು ಪ್ರಸ್ತಾಪಿಸಿ ಬ್ರಿಟನ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕೆಂದು ಬೇಡಿಕೆಯಿಟ್ಟಿದ್ದು, ಭಾರತವು ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಹೊಂದಿದ್ದು ಅದು ಮಾನವ ಹಕ್ಕುಗಳನ್ನು ರಕ್ಷಿಸಲಿದೆ ಎಂದು ಹೇಳುವ ಮೂಲಕ ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ಪಾಕಿಸ್ತಾನದ ಪ್ರಸ್ತಾಪಕ್ಕೆ ತೆರೆ ಎಳೆದಿದೆ.

ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಧ್ಯ ಪ್ರವೇಶ ಮಾಡುವ ಪ್ರಸ್ತಾಪ ಬ್ರಿಟೀಷ್ ಸರ್ಕಾರದ ಮುಂದಿಲ್ಲ. ಅದರಲ್ಲೂ ಭಾರತ ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಹೊಂದಿದ್ದು, ಮಾನವಹಕ್ಕುಗಳನ್ನು ಖಾತರಿಪಡಿಸಲಿದೆ. ಆದರೆ, ಭಾರತ ತನ್ನ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ನಾವು ಒಪ್ಪುತ್ತೇವೆ ಎಂದು ಬ್ರಿಟನ್ ಸರಕಾರದ ಪ್ರತಿನಿಧಿ ಬ್ಯಾರನೆಸ್ ಸ್ಟೆಡ್ ಮನ್ ಹೇಳಿದರು.

Leave a Reply

Your email address will not be published. Required fields are marked *