‘ಬೇಟಿ ಬಚಾವ್ ಬೇಟಿ ಪಡಾವ್’ ಅಭಿಯಾನ ಯಶಸ್ವಿಯಾಗಬೇಕಾದರೆ ‘ಬೇಟಿ’ ಬದುಕಿರಬೇಕಾಗುತ್ತದೆ: ಶಬಾನಾ ಆಜ್ಮಿ!

ನ್ಯೂಸ್ ಕನ್ನಡ ವರದಿ(18-04-3018): ಬೇಟಿ ಬಚಾವ್ ಬೇಟಿ ಪಡಾವ್ ಎಂಬ ನಮ್ಮ ಅಭಿಯಾನವು ಯಶಸ್ವಿಯಾಗಬೇಕಾದರೆ ನಮ್ಮ ಹೆಣ್ಣು ಮಕ್ಕಳನ್ನು ನಾವು ರಕ್ಷಿಸಬೇಕಾಗುತ್ತದೆ ಎಂದು ಬಾಲಿವುಡ್ ಚಿತ್ರ ನಟಿ ಶಬಾನಾ ಆಜ್ಮಿ ಹೇಳಿದ್ದಾರೆ.

ಮುಂಬೈಯಲ್ಲಿ ಅನು ಮತ್ತು ಶಶಿ ರಾಜನ್ ಆಯೋಜಿಸಿದ್ದ 20ನೇ ಬೇಟಿ ಫ್ಲೋ ಜಿಆರ್8 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿತ್ತು . ವಿಶ್ವದ ಇತರ ದೇಶಗಳು ನಮ್ಮ ಶಿಷ್ಟಾಚಾರವನ್ನು ಕಂಡು ಕಲಿಯುತ್ತಿದ್ದರು. ಆದರೆ ಬರುಬರುತ್ತಾ ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುವುದು ತಿಳಿಯುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ನಮ್ಮ ದೇಶದ ಮಹಿಳೆಯರು ದೇಶದ ಬೆಳವಣಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರು ಬಲಿಷ್ಠರಾಗಿ ದೇಶವನ್ನು ಮುನ್ನಡೆಸಿದ ಇತಿಹಾಸಗಳೂ ನಮ್ಮ ದೇಶದಲ್ಲಿ ಕಾಣಲು ಸಾಧ್ಯವಾಗುತ್ತದೆ. ಆದರೆ ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರ ಹಾಗೂವಕೊಲೆಗಳಂತಹ ಇತ್ತೀಚಿನ ಕೆಲವು ಘಟನೆಗಳು ನನಗೆ ಬಹಳ ನೋವನ್ನುಂಟುಮಾಡಿದೆ ಎಂದರು.

Leave a Reply

Your email address will not be published. Required fields are marked *