ಬೆಳಗಾವಿ: ಮತದಾರರಿಗೆ ನೀಡಲು ಕೊಂಡೊಯ್ಯುತ್ತಿದ್ದ 7ಕೋಟಿ ರೂ. ನಕಲಿ ನೋಟುಗಳ ವಶ!

ನ್ಯೂಸ್ ಕನ್ನಡ ವರದಿ-(18.04.18): ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯು ಮೇ12ರಂದು ನಿಗದಿಯಾಗಿದೆ. ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಚುನಾವಣಾ ಪ್ರಚಾರ ಬಿರುಸಾಗಿ ನಡೆಯುತ್ತಿದೆ. ಈ ನಡುವೆ ಇದೀಗ ಮತದಾರರಿಗೆ ಆಮಿಷವೊಡ್ಡುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಮತದಾರರಿಗೆ ಅಮಿಷವೊಡ್ಡಲೆಂದು 2000ರೂ. ಮತ್ತು 500ರೂ. ಮುಖಬೆಲೆಯ ಹಾಗೂ ಚಲಾವಣೆಯಿಲ್ಲದ 1000ರೂ. ಮುಖಬೆಲೆಯ 7 ಕೋಟಿ ರೂ. ನಕಲಿ ನೋಟನ್ನು ಪೊಲೀಸರು ವಶಪಡಿಸಿಕೊಂಡ ಘಟನೆಯು ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ₹7 ಕೋಟಿ ನಕಲಿ ನೋಟು ವಶ

ಬೆಳಗಾವಿಯಲ್ಲಿ ₹7 ಕೋಟಿ ನಕಲಿ ನೋಟು ವಶಪಾಳು ಬಿದ್ದ ಲೋಕೋಪಯೋಗಿ ವಸತಿ ಗೃಹದಲ್ಲಿ ಸಂಗ್ರಹಿಸಿದ್ದ ₹ 500 ಹಾಗೂ ₹ 2000 ಮುಖಬೆಲೆಯ ಮಾದರಿಯ ನಕಲಿ ನೋಟುಗಳನ್ನು ಬುಧವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುದ್ದಿ: bit.ly/2JQyj8V#ಪ್ರಜಾವಾಣಿ #Prajavani #FakeNote #Belagavi

Posted by Prajavani on Tuesday, April 17, 2018

ಬೆಳಗಾವಿಯ ವಿಶ್ವೇಶ್ವರಯ್ಯ ನಗೆರದ ಪಾಳು ಬಿದ್ದಿರುವ ಲೋಕೋಪಯೋಗಿ ವಸತಿಗೃಹದಲ್ಲಿ ಬಚ್ಚಿಟ್ಟಿದ್ದ 2000ರೂ. ಹಾಗೂ 500ರೂ. ಮುಖಬೆಲೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯೋರ್ವನನ್ನು ಬಂಧಿಸಲಾಗಿದೆ. ಈ ಕುರಿತಾದಂತೆ ಖಚಿತ ಮಾಹಿತಿಯ ಮೇರೆಗೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ಸಥಳಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯಲ್ಲಿ ₹7 ಕೋಟಿ ನಕಲಿ ನೋಟು ವಶ

ಬೆಳಗಾವಿಯಲ್ಲಿ ₹7 ಕೋಟಿ ನಕಲಿ ನೋಟು ವಶಪಾಳು ಬಿದ್ದ ಲೋಕೋಪಯೋಗಿ ವಸತಿ ಗೃಹದಲ್ಲಿ ಸಂಗ್ರಹಿಸಿದ್ದ ₹ 500 ಹಾಗೂ ₹ 2000 ಮುಖಬೆಲೆಯ ಮಾದರಿಯ ನಕಲಿ ನೋಟುಗಳು ವಶ. ಸುದ್ದಿ: bit.ly/2JQyj8V#ಪ್ರಜಾವಾಣಿ #Prajavani #FakeNote #Belagavi

Posted by Prajavani on Tuesday, April 17, 2018

Leave a Reply

Your email address will not be published. Required fields are marked *