ನೋಟುಗಳ ಕೊರತೆ: ರಾಜ್ಯದ ಎಟಿಎಂ ಗಳಲ್ಲೂ ಕಾಣುತ್ತಿದೆ ‘ನೋ ಕ್ಯಾಶ್’ ಬೋರ್ಡ್!

ನ್ಯೂಸ್ ಕನ್ನಡ ವರದಿ(18-04-2018): ದೇಶಾದ್ಯಂತ ಎಟಿಎಂ ಗಳಲ್ಲಿ ನೋಟಿನ ಕೊರತೆ ಎದುರಿಸುತ್ತಿರುವ ಕುರಿತು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂದು ರಾಜ್ಯದ ಬಹುತೇಕ ಬ್ಯಾಂಕ್ ಗಳು ‘ನೋ ಕ್ಯಾಶ್’ ಬೋರ್ಡ್ ಹಾಕುವುದರೊಂದಿಗೆ ಜನರು ಬ್ಯಾಂಕುಗಳಲ್ಲಿ ನೋಟಿಗಾಗಿ ಪರದಾಡುವಂತಾಯಿತು.

ಬೆಂಗಳೂರು ಸೇರಿದಂತದೆ ರಾಜ್ಯದ ಬಹುತೇಕ ನಗರಗಳ ಬ್ಯಾಂಕುಗಳಲ್ಲಿ ನೋಟಿನ ಕೊರತೆ ಎದ್ದು ಕಾಣುತ್ತಿತ್ತು. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಹುತೇಕ ಶಾಖೆಗಳ ಎಟಿಎಂ ಎದುರು ನೋ ಕ್ಯಾಶ್ ಪಲಕ ರಾರಾಜಿಸುತ್ತಿತ್ತು. ಜನರ ಅವಶ್ಯಕತೆಗೆ ಬೇಕಾಗುವಷ್ಟು ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳು ಬ್ಯಾಂಕುಗಳಿಗೆ ಪೋರೈಕೆಯಾಗಿದೆ ಎಂದು ಕೇಂದ್ರ ಹಣಕಾಸು ಮಂತ್ರಿಗಳು ಹೇಳುತ್ತಿದ್ದರೂ, ನೋಟಿನ ಕೊರತೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಅಹಮದಾಬಾದಿನ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೊಂದರಲ್ಲಿ ನಿನ್ನೆ ನೋಟಿನ ಕೊರತೆ ಕಾರಣದಿಂದಾಗಿ ಕಾವಲುಗಾರ ಎಟಿಎಂ ನಲ್ಲಿ ನಿರಾಳನಾಗಿ ನಿದ್ದೆ ಮಾಡುತ್ತಿರುವ ದೃಶ್ಯವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

Leave a Reply

Your email address will not be published. Required fields are marked *