ಅನಂತ್ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ ನಾನು: ಸಿಎಂ ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ-(18.04.18): ಇಂದು ಮುಂಜಾನೆ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯ ಬೆಂಗಾವಲು ಕಾರಿಗೆ ಲಾರಿಯೊಮದು ಢಿಕ್ಕಿ ಹೊಡೆದಿತ್ತು. ಈ ಕುರಿತು ಅನಂತ್ ಕುಮಾರ್ ನನ್ನ ಕೊಲೆಗೆ ಸಂಚು ಹೋಡಲಾಗಿದೆ ಎಂದಿದ್ದರು. ಬಳಿಕ ಕೊಲೆಗೆ ಸಂಚು ನಡೆದಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದರು. ಈ ಕುರಿತು ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದಿದ್ದರು. ಇದೀಗ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಅನಂತ್ ಕುಮಾರ್ ಹೆಗಡೆ, ಪ್ರತಾಪ ಸಿಂಹಗಿಂತಲೂ ಪಕ್ಕಾ ಹಿಂದುವಾಗಿದ್ದೇನೆ. ಇನ್ನು ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸಿದರೆ ಕ್ರಿಮಿನಲ್ ಯೋಚನೆ ಮಾಡಬಾರದು ಎಂದು ಟಾಂಗ್ ನೀಡಿದ್ದಾರೆ.

ಪ್ರತಪಾ ಸಿಂಹ ಟ್ವಿಟ್ಟರ್ ನಲ್ಲಿ ಮಾಡಿದ ಸವಾಲಿನ ಕುರಿತು ಮಾತನಾಡಿದ ಅವರು, ನನಗೆ ಘಟನೆ ಎಲ್ಲಿ ನಡೆದಿದೆ ಎಂದು ಸರಿಯಾಗಿ ತಿಳಿದಿಲ್ಲ. ಓವರ್ ಸ್ಪೀಡ್ ನಿಂದ ಇಂತಹಾ ಕೆಲವು ಅನಾಹುತಗಳು ಸಂಭವಿಸುತ್ತದೆ. ಅಜಾಗರೂಕತೆಯಿಂದ ಅಪಘಾತಗಳಾದಾಗ ಕ್ರಿಮಿನಲ್ ಯೋಚನೆ ಮಾಡಬಾರದು. ಪ್ರತಾಪ ಸಿಂಹ, ಅನಂತ್ ಕುಮಾರ್ ಹೆಗ್ಡೆ ಕೋಮುವಾದಿ ಹಿಂದೂಗಳು, ನಾನು ಜಾತ್ಯತೀತ ಹಿಂದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *