ಸ್ವಾತಂತ್ರ್ಯ ಪಡೆದು ಏಳು ದಶಕಗಳು ಕಳೆದರೂ ಕಥುವಾದಂತಹ ಪ್ರಕರಣ ನಡೆಯುತ್ತಿರುವುದು ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್!

ನ್ಯೂಸ್ ಕನ್ನಡ ವರದಿ(18-04-2018): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳೇ ಕಳೆದಿದ್ದು, ಇನ್ನೂ ಕೂಡ ನಮ್ಮ ದೇಶದಲ್ಲಿ ಕಥುವಾದಂತಹ ಹೇಯ ಘಟನೆಗಳು ನಡೆಯುತ್ತಿದೆ ಎಂದರೆ ಅದು ನಮಗೆಲ್ಲಾ ನಾಚಿಕೆಗೇಡು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಷಾದ ವ್ಯಕ್ತಪಡಿಸಿದ್ದಾರೆ.

ಜಮ್ಮುವಿನಲ್ಲಿರುವ ಶ್ರೀಮಾತಾ ವೈಷ್ಣೋದೇವಿ ವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾವಿಂದು ಎಂತಹ ಸಮಾಜವನ್ನು ನಿರ್ಮಿಸುತ್ತಿದ್ದೇವೆ.ಇದು ನಮ್ಮ ದೇಶಕ್ಕೆ ಶೋಭೆ ತರುವಂತಹ ಕೆಲಸವಲ್ಲ ಎಂದು ಕಥುವಾದಲ್ಲಿ ನಡೆದ 7ರ ಹರೆಯದ ಹುಡುಗಿಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣವನ್ನು ತೀವೃವಾಗಿ ಖಂಡಿಸಿದರು.

ಇಂತಹ ಪ್ರಕರಣಗಳು ನಡೆಯದಂತೆ ನಾವು ಮುನ್ನೆಚ್ಚರಿಕೆ ವಹಿಸಬೇಕೆಂದ ರಾಷ್ಟ್ರಪತಿಗಳು ದೇಶದಲ್ಲಿ ಶಾಂತಿ ಸೌಹಾರ್ಧತೆಯ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

Leave a Reply

Your email address will not be published. Required fields are marked *