ವೈರಲಾಗುತ್ತಿದೆ ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯ ಕುರಿತು ಅಮಿತ್ ಷಾ ವಿರುದ್ಧ ಬಿಜೆಪಿ ಕಾರ್ಯಕರ್ತನ ಟ್ವೀಟ್!
ನ್ಯೂಸ್ ಕನ್ನಡ ವರದ(18-04-2018): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಆಯ್ಕೆಯಾದ ಘೋಷಣೆಯಾಗುತ್ತಿದ್ದಂತೆಯೇ ಪುತ್ತೂರಿನಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
“ಪ್ರೀತಿಯ ಚಾಣಕ್ಯ ಅಮಿತ್ ಶಾ ಅವರೇ, ನಾನು ನಿಮ್ಮ ತಲೆಯಲ್ಲಿ ಕೂದಲು ಮಾತ್ರ ಇಲ್ಲ ಎಂದು ತಿಳಿದಿದ್ದೆ, ಆದರೆ ನಿಮ್ಮ ತಲೆಯಲ್ಲಿ ಮೆದುಳು ಕೂಡ ಇಲ್ಲ ಎಂಬುವುದು ಈಗ ನನಗೆ ಖಾತ್ರಿಯಾಗುತ್ತಿದೆ. ಕರ್ನಾಟಕದ ಪುತ್ತೂರಿನಲ್ಲಿ ಯಾರಿಗೆ ಟಿಕೆಟ್ ನೀಡಿದ್ದೀರಿ?. ಈ ಸಲ ನಿಮ್ಮ ಮಿಷನ್ 150 ಪೂರ್ಣವಾಗುತ್ತದೋ ಇಲ್ವೋ ನಾನರಿಯೆ ಆದರೆ ಪುತ್ತೂರಿನಲ್ಲಿ ಬಿಜೆಪಿ ಸೋಲುವ ಮೂಲಕ ಮಿಷನ್ 149 ಎಂಬುವುದು ದೃಢ” ಎನ್ನುವ ಆದಿತ್ಯ ನಾರಾಯಣ ಎಂಬ ಬಿಜೆಪಿ ಕಾರ್ಯಕರ್ತನೋರ್ವ ಮಾಡಿರುವ ಟ್ವೀಟ್ ಸಾಮಾಜಿಕ ತಾಣದಲ್ಲಿ ವೈರಲಾಗುತ್ತಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ದೂರದ ಸಂಬಂಧಿಯಾಗಿರುವ ಸಂಜೀವ ಮಠಂದೂರು ಅವರಿಗೆ ಪಕ್ಷ ಈ ಸಲ ಟಿಕೆಟ್ ನೀಡಿರುವುದರಿಂದ ಸಂಸದ ನಳೀನ್ ಹಾಗೂ ಡಿವಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಅರುಣ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈ ಯವರು ಒಳಂಗಿದೊಳೊಗೆ ತಮ್ಮ ಬೆಂಬಲಿಗರ ಸಭೆ ನಡೆಸುವ ಮೂಲಕ ರಣತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂಜಿದೆ.