ಜನಾರ್ದನ ಪೂಜಾರಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ರಮಾನಾಥ ರೈ!
ನ್ಯೂಸ್ ಕನ್ನಡ ವರದಿ-(18.04.18): ಕೆಲವು ವರ್ಷಗಳಿಂದಲೇ ಕರ್ನಾಟಕ ರಾಜ್ಯ ಅರಣ್ಯ ಸಚಿವ ರಮಾನಾಥ್ ರೈ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ನಡುವೆ ವೈಮನಸ್ಸು ಉಂಟಾಗಿತ್ತು. ರಮಾನಾಥ ರೈ ಪೂಜಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಜನಾರ್ದನ ಪೂಜಾರಿಯ ಆಪ್ತ ಹರಿಕೃಷ್ಣ ಬಂಟ್ವಾಳ್ ಆರೋಪ ಮಾಡಿದ್ದಲ್ಲದೇ ಬಿಜೆಪಿ ಪಕ್ಷವನ್ನೂ ಸೇರಿದ್ದರು. ಇದೀಗ ರಮಾನಾಥ ರೈ ಜನಾರ್ದನ ಪೂಜಾರಿಯವರ ಮನೆಗೆ ತೆರಳಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಜನಾರ್ದನ ಪೂಜಾರಿಯವರ ಆರೋಗ್ಯ ಹದಗೆಟ್ಟಿದ್ದು, ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಪೂಜಾರಿಯವರನ್ನು ಸಂದರ್ಶಿಸಿದ ರಮಾನಾಥ ರೈ ಅವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಜನಾರ್ದನ ಪೂಜಾರಿ, “ಬಂಟ್ವಾಳದ ಜನತೆ ಬುದ್ಧಿವಂತರು, ಅವರು ನಿಮ್ಮ ಅಭಿವೃದ್ಧಿಗೆ ಮತ ಚಲಾಯಿಸುತ್ತಾರೆ. ದೇವರು ನಿಮ್ಮ ಕೈಬಿಡುವುದಿಲ್ಲ ಎಂದು ಹರಸಿದರು. ಬಳಿಕ ರೈ ಕಾರಿನವರೆಗೂ ಬಂದು ಜನಾರ್ದನ ಪೂಜಾರಿ ಬೀಳ್ಕೊಟ್ಟರು.