ಗುಜರಾತ್ ನಲ್ಲಿ ಅತ್ಯಾಚಾರವೆಸಗಿ ಕೊಲೆಗೈಯಲ್ಪಟ್ಟ 9ರ ಹರೆಯದ ಬಾಲಕಿಯ ಗುರುತು ಪತ್ತೆ!

ನ್ಯೂಸ್ ಕನ್ನಡ ವರದಿ(18-04-2018): ಗುಜರಾತಿನ ಸೂರತ್ ನಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಲ್ಪಟ್ಟ 9ರ ಹರೆಯದ ಬಾಲಕಿಯ ಗುರುತು ಪತ್ಚೆಯಾಗಿದ್ದು, ಬಾಲಕಿಯು ಆಂದ್ರ ಪ್ರದೇಶ ಮೂಲದವಳೆಂದು ಸ್ಪಷ್ಟವಾಗಿದೆ. 86 ಗಾಯದ ಕುರುಹು ಇರುವ ಈ ಬಾಲಕಿಯ ಮೃತ ದೇಹವು ಎಪ್ರಿಲ್ 6 ರಂದು ಗುಜರಾತಿನ ಸೂರತ್ ನಲ್ಲಿ ಪತ್ತೆಯಾಗಿದ್ದವು.

ಮೃತ ಬಾಲಕಿಯ ಪೋಷಕನೆಂದು ಹೇಳಿದ ವ್ಯಕ್ತಿಯೋರ್ವ ಆಂದ್ರ ಪ್ರದೇಶದಿಂದ ತನ್ನ ಕೆಲವು ಕುಟುಂಬಸ್ಥರೊಂದಿಗೆ ಬಂದಿದ್ದು, ತನ್ನ ಮಗಳು ಕಳೆದ ಅಕ್ಟೋಬರ್ 17ರಿಂದ ನಾಪತ್ತೆಯಾಗಿದ್ದಾಳೆಂದು ಹೇಳುತ್ತಿದ್ದಾನೆ. ಮಾತ್ರವಲ್ಲ ತನ್ನ ನಾಪತ್ತೆಯಾದ ಮಗಳ ಆಧಾರ್ ಕಾರ್ಡ್ ಆತನ ಬಳಿಯಿದ್ದು, ಹತ್ಯೆಗೀಡಾದ ಬಾಲಕಿಯು ತನ್ನ ಮಗಳೆಂದು ಹೇಳುತ್ತಿದ್ದಾನೆ. ನಮಗೆ ದೃಢೀಕರಣ ಅಗತ್ಯವಾದ್ದರಿಂದ ಡಿಎನ್ಎ ಪರೀಕ್ಷೆ ಮಾಡಿದ ನಂತರ ದೃಢಪಟ್ಟಲ್ಲಿ ಮೃತದೇಹವನ್ನು ವಾರಿಸುದಾರರಿಗೆ ಬಿಟ್ಟು ಕೊಡಲಾಗುವುದೆಂದು ಸೂರತ್ ಪೋಲೀಸ್ ಕಮೀಷನರ್ ಸತೀಶ್ ಶರ್ಮ ಹೇಳಿದ್ಜಾರೆ.

ಹತ್ಯೆಗೀಡಾದ ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಪೋಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಹತ್ಯೆಯಾಗುವ ಮುನ್ನ ಬಾಲಕಿಯು ಸತತ ಒಂದು ವಾರಗಳ ಕಾಲ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *