ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜಕೀಯಕ್ಕೆ? ಕುಮುಟಾದಿಂದ ಸ್ಪರ್ಧಿಸಲಿದ್ದಾರೆಯೇ ಕೇಂದ್ರ ಸಚಿವ?!
ನ್ಯೂಸ್ ಕನ್ನಡ ವರದಿ(18-04-2018): ತನ್ನ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ಧಿಯಾಗುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರಾಜ್ಯದ ರಾಜಕೀಯಕ್ಕೆ ಮರಳಿದ್ದಾರೆಯೇ?. ಹಿಗೊಂದು ಸುದ್ಧಿ ಅವರ ಆಪ್ತ ವಲಯದಿಂದ ಕೇಳಿಬರತೊಡಗಿದೆ.
ತನಗೆ ಕುಮುಟಾದಿಂದ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧ ಎಂದು ಅನಂತ್ ಕುಮಾರ್ ಹೆಗಡೆ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದು, ಒಂದು ವೇಳೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದರೆ ಅವರು ಕುಮುಟಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ದಿನಕರ ಶೆಟ್ಟಿ ಹಾಗೂ ಈ ಹಿಂದೆ ಬಿಜೆಪಿ ಟಿಕೆಟಿನಲ್ಲಿ ಸ್ಪರ್ಧಿಸಿದ್ದ ಸೂರಜ್ ನಾಯಕ್ ಅವರು ಕುಮುಟಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅನಂತ್ ಕುಮಾರ್ ಇಚ್ಚೆಗೆ ಬಿಜೆಪಿ ನಾಯಕತ್ವ ಸೈ ಎನ್ನತ್ತದೋ ಕಾದು ನೋಡಬೇಕಾಗಿದೆ.