ಸಲೀಸಾಗಿ ಸುಳ್ಳು ಹೇಳುವ ಮೋದಿ ಇರುವಾಗ ಬಿಜೆಪಿಗೆ ಸುಳ್ಳು ಹರಡಲು ಸಾಮಾಜಿಕ ತಾಣದ ಅಗತ್ಯವಿಲ್ಲ: ರಮ್ಯಾ
ನ್ಯೂಸ್ ಕನ್ನಡ ವರದಿ(18-04-2018): ಸದಾ ಸುಳ್ಳು ಹೇಳುತ್ತಾ ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಪ್ರಧಾನಿ ಮೋದಿಯವರು ಇರುವಾಗ, ಬಿಜೆಪಿ ಪಕ್ಷಕ್ಕೆ ಸುಳ್ಳು ಹೇಳಲು ಸಾಮಾಜಿಕ ತಾಣವನ್ನು ಬಳಸುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಂಸದೆ ರಮ್ಯಾ ಮತ್ತೊಮ್ಮೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಖಾಸಗಿ ಸುದ್ಧಿ ಮಾದ್ಯಮಕ್ಕೆ ನೀಡಿದ ಸಂದರ್ಶನವನ್ನು ಮಾಧ್ಯಮವು ಟ್ವೀಟರ್ ನಲ್ಲಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣಕ್ಕಿಂತ ಅಚ್ಚುಕಟ್ಟಾಗಿ ಸುಳ್ಳು ಹರಡುತ್ತಿರುವ ಮೋದಿಯವರೇ ಬಿಜೆಪಿಗೆ ಸಾಕು ಇನ್ನು ಸುಳ್ಳು ಹಬ್ಬಿಸಲು ಬೇರೆ ಸಾಮಾಜಿಕ ತಾಣಗಳಿಗೆ ಮೊರೆ ಹೋಗಬೇಕಾದ ಅವಶ್ಯಕತೆಯಿಲ್ಲ ಎಂದು ಮೋದಿ ವಿರುದ್ಧ ರಮ್ಯ ಟೀಕೆ ಮಾಡಿದ್ದಾರೆ.