ಕಾರ್ಯಕರ್ತರ ಉತ್ಸಾಹ ನೋಡಿದರೆ 150 ಸ್ಥಾನ ಗೆಲ್ಲುವುದು ಖಚಿತವಾಗುತ್ತಿದೆ: ನೌಹಿರಾ ಶೇಖ್!
ನ್ಯೂಸ್ ಕನ್ನಡ ವರದಿ(18-04-2018): ನಮ್ಮ ಸಮೀಕ್ಷೆ ಪ್ರಕಾರ ಸುಮಾರು 100 ಸ್ಥಾನಗಳಲ್ಲಿ ಜಯಗಳಿಸುವ ಭರವಸೆಯಿತ್ತು. ಕಾರ್ಯಕರ್ತರ ಉತ್ಸಾಹ ನೋಡಿದರೆ ಇದೀಗ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಆಲ್ ಇಂಡಿಯಾ ಮಹಿಳಾ ಎಂಪವರ್ ಪಕ್ಷದ ಅಧ್ಯಕ್ಷೆ ನೌಹಿರಾ ಶೇಖ್ ಹೇಳಿದ್ದಾರೆ.
ತನ್ನ ಪಕ್ಷದ ಎರಡನೇ ಅಭ್ಯರ್ಥಿ ಬಿಡುಗಡೆ ಮಾಡಿ ಮಾತನಾಡಿದ ನೌಹಿರಾ ಶೇಖ್, ಎರಡನೇ ಪಟ್ಟಿಯಲ್ಲಿ 75 ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಲಾಗಿದೆ.ಇದೀಗ ಬಹುತೇಕ 224 ಕ್ಷೇತ್ರದ ಅಭ್ಯರ್ಥಿಗಳ ಘೋಷಣೆಯಾದಂತಾಗಿದ್ದು, ಪಕ್ಷವು ಸುಮಾರು 35 ರಿಂದ 40 ಸ್ಥಾನಗಳಲ್ಲಿ ಮಹಿಳೆಯರಿಗೆ ಹಾಗೂ 8 ಸ್ಥಾನಗಳಲ್ಲಿ ರೈತರಿಗೆ ಟಿಕೆಟ್ ನೀಡಲಾಗಿದೆ ಎಂದರು.
ಎರಡನೇ ಪಟ್ಟಿಯಲ್ಲಿ ಬಿಗ್ ಬಾಸ್ ಖ್ಯಾತಿಯ ನರ್ಸ್ ಜಯಲಕ್ಷ್ಮೀ ಬಿಟಿಎಂ ಲೇಔಟ್ ನಿಂದ ಟಿಕೆಟ್ ಪಡೆದಿದ್ದಾರೆ.