ವಿದೇಶಿ ಕಾರ್ಮಿಕರ ಮೇಲೆ ಸುಳ್ಳು ದೂರು ನೀಡುವ ಪ್ರಾಯೋಜಕರ ವಿರುದ್ಧ ಕಠಿನ ಕ್ರಮ: ಸೌದಿ ಕಾರ್ಮಿಕ ಸಚಿವಾಲಯ ಎಚ್ಚರಿಕೆ!

ನ್ಯೂಸ್ ಕನ್ನಡ ವರದಿ(18-04-2018): ತಮ್ಮ ವಿದೇಶಿ ಕಾರ್ಮಿಕರ ಬಗ್ಗೆ ಸುಳ್ಳು ದೂರು(ಹುರೂಬ್) ದಾಖಲಿಸುವ ಪ್ರಾಯೋಜಕರು ಹಾಗೂ ಸಂಸ್ಥೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದೆಂದು ಸೌದಿ ಅರೇಬಿಯಾದ ಕಾರ್ಮಿಕ ಸಚಿವಾಲಯವು ಎಚ್ಚರಿಕೆಯನ್ನು ನೀಡಿದೆ.

ನ್ಯೂಸ್ ಕನ್ನಡ ವರದಿ(17-04-2018): ವಿನಾಕಾರಣ ತನ್ನ ಕೆಲಸಗಾರರು ಪಲಾಯನಗೈದಿದ್ದಾರೆ ಅಥವಾ ಕೆಲಸಕ್ಕೆ ಬರುವುದಿಲ್ಲವೆಂದು ಪ್ರಾಯೋಜಕರು ಹಾಗೂ ಕಂಪೆನಿಗಳು ಸುಳ್ಳು ದೂರು ನೀಡುವಂತಿಲ್ಲ. ಒಂದು ವೇಳೆ ಪ್ರಾಯೋಜಕರು ನೀಡಿದ ದೂರು ಸುಳ್ಳೆಂದು ದೃಢಪಟ್ಟಲ್ಲಿ ಅಂತಹ ಕೆಲಸಗಾರರಿಗೆ ತನ್ನ ಪ್ರಾಯೋಜಕನ ಅನುಮತಿಯಿಲ್ಲದೆ ಪ್ರಾಯೋಜಕತ್ವವನ್ನು ಬದಲಾಯಿಸಬಹುದೆಂದು ಕಾರ್ಮಿಕ ಇಲಾಖೆಯು ತಿಳಿಸಿದೆ.

ಸತತ ಮೂರು ತಿಂಗಳು ವೇತನದ ಲಭಿಸದಿದ್ದಲ್ಲಿ, ಪ್ರಾಯೋಜಕರ ಅನುಮತಿಯಿಲ್ಲದೆ ವಿದೇಶಿಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಬಹುದು.ಇಖಾಮಾ ಕಾಲಾವಧಿ ಮುಗಿದಿದ್ದು, ನವೀಕರಿಸಲು ನಿರಾಕರಿಸುವ ಸಂದರ್ಭದಲ್ಲೂ ಉದ್ಯೋಗದಾತರ ಅನುಮತಿ ಇಲ್ಲದೆ ವಿದೇಶಿ ಕೆಲಸಗಾರರು ಇನ್ನೊಬ್ಬ ಉದ್ಯೋಗದಾತರ ಪ್ರಾಯೋಜಕತ್ವವನ್ನು ಪಡೆಯಬಹುದಾಗಿದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *