ನನ್ನ ಮೊಮ್ಮಗಳೆಂದುಕೊಂಡು ನಾನು ಕೆನ್ನೆ ಸವರಿದ್ದೆ: ಕ್ಷಮೆ ಯಾಚಿಸಿದ ತಮಿಳುನಾಡು ರಾಜ್ಯಪಾಲ!

ನ್ಯೂಸ್ ಕನ್ನಡ ವರದಿ-(18.04.18): ತಮಿಳುನಾಡಿನ ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ರವರು ಹೊಸ ವಿವಾದಕ್ಕೀಡಾಗಿದ್ದು, ಪ್ರಶ್ನೆ ಕೇಳಿದ ಪತ್ರಕರ್ತೆಯೋರ್ವರ ಕೆನ್ನೆ ಸವರಿದ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಈ ಕುರಿತಾದಂತೆ ಪತ್ರಕರ್ತೆ, ರಾಜ್ಯಪಾಕರ ಈ ವರ್ತನೆ ಸರಿಯಲ್ಲ, ರಾಜ್ಯಪಾಲರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಕೊನೆಗೂ ಪತ್ರದ ಮೂಲಕ ರಾಜ್ಯಪಾಲರು ಪತ್ರಕರ್ತೆಯ ಕ್ಷಮೆ ಯಾಚಿಸಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತಾದಂತೆ ಪತ್ರ ಬರೆದ ರಾಜ್ಯಪಾಲರು, ನೀವು ಕೇಳಿದ ಪ್ರಶ್ನೆಯು ನನಗೆ ಇಷ್ಟವಾಗಿತ್ತು. ಈ ಸಂದರ್ಭದಲ್ಲಿ ನನ್ನ ಮೊಮ್ಮಗಳೆಂದುಕೊಂಡು, ನಿಮ್ಮನ್ನು ಆ ಸ್ಥಾನದಲ್ಲಿ ಕಂಡು ನಾನು ಕೆನ್ನೆ ಸವರಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ. ನಿಮ್ಮ ನೋವಿನ ಕುರಿತು ನನಗೆ ಅರಿವಾಗಿದ್ದು, ನಾನು ಈ ಕುರಿತು ಕ್ಷಮೆ ಯಾಚಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರ ಸಮೇತ ಬರಹವನ್ನು ಪತ್ರಕರ್ತೆ ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *