ನನ್ನನ್ನು ‘ಮೌನ ಪ್ರಧಾನಿ’ ಎಂದು ಕರೆಯುತ್ತಿದ್ದ ಮೋದಿ ಈಗ ಸ್ವತಹ ಮೌನವಾಗಿದ್ದಾರೆ: ಮನಮೋಹನ್ ಸಿಂಗ್!
ನ್ಯೂಸ್ ಕನ್ನಡ ವರದಿ(18-04-2018): ನಾನು ಪ್ರಧಾನ ಮಂತ್ರಿಯಾಗಿದ್ದಾಗ ಮಾತನಾಡದ ಪ್ರಧಾನಿ ಎಂದು ಲೇವಡಿ ಮಾಡುತ್ತಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಸ್ವತಹ ತಾನೇ ಮೌನಿಯಾಗಿದ್ದಾರೆ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಕಥುವಾ ಹಾಗೂ ಉನೋವ್ ಅತ್ಯಾಚಾರ ಪ್ರಕರಣಗಳಲ್ಲಿ ಪ್ರಧಾನಿ ಮೋದಿ ಗಾಢ ಮೌನವನ್ನು ತಳೆದಿದ್ದು, ದೇಶದ ಪ್ರಧಾನಿಯಾಗಿದ್ದುಕೊಂಡು ತನಗೆ ಸಂಬಂದಪಟ್ಟ ವಿಷಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ನಾನು ಪ್ರಧಾನಿಯಾಗಿದ್ದಾಗ ಬಾಯಿ ತುಂಬಾ ಮಾತನಾಡುತ್ತಿದ್ದ ನರೇಂದ್ರ ಮೋದಿಯವರು ತಾನು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.