ಐಪಿಎಲ್ ನಲ್ಲಿ ಅತೀಹೆಚ್ಚು ರನ್ ಗಳಿಸಿದರೂ ಆರೆಂಜ್ ಕ್ಯಾಪ್ ಧರಿಸದ ಕೊಹ್ಲಿ: ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ-(18.04.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಸದ್ಯ ಯಶಸ್ವಿಯಾಗಿ ಸಾಗುತ್ತಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗಮನಾರ್ಹ ಪ್ರದರ್ಶನ ನೀಡಿದರೂ ಪಂದ್ಯಗಳನ್ನು ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಪ್ರತೀ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯಂತೂ ಉತ್ತಮ ಪ್ರದರ್ಶನ ನಿಡುತ್ತಿದ್ದಾರೆ. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯಾಟದಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 92 ರನ್ ದಾಖಲಿಸಿದ್ದರು. ಆದರೂ ಪಂದ್ಯ ಗೆಲ್ಲುವಲ್ಲಿ ತಂಡ ವಿಫಲವಾಗಿತ್ತು. ಈ ನಡುವೆ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಅತೀಹೆಚ್ಚು ರನ್ ಗಳಿಸಿದ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರೂ ಅವರು ಆರೆಂಜ್ ಕ್ಯಾಪ್ ಧರಿಸಿರಲಿಲ್ಲ.

ಈ ಕುರಿತು ಪಂದ್ಯಾಟದ ಬಳಿಕ ವಿರಾಟ್ ಕೊಹ್ಲಿ ಮಾತನಾಡಿದ್ದು, ಇಂದಿನ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ತೋರಿದೆ. ನಾವು ಪ್ರಾರಂಭದಲ್ಲಿ ಉತ್ತಮವಾಗಿಯೇ ಆಡಿದೆವು. ತಂಡವು ಗೆಲುವು ಸಾಧಿಸದ ಸಂದರ್ಭದಲ್ಲಿ ನನ್ನ ವೈಯಕ್ತಿಕ ಶ್ರೇಯಸ್ಸನ್ನು ಕೊಂಡಾಡುವುದು ಸರಿಯಲ್ಲ. ಆದ್ದರಿಂದ ನನಗೆ ಆರೆಂಜ್ ಕ್ಯಾಪ್ ಧರಿಸಬೇಕೆಂದು ಅನ್ನಿಸಲಿಲ್ಲ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಉತ್ತಮವಾಗಿ ಆಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಮೊನ್ನೆ ತಾನೇ ಕೊಹ್ಲಿಯ ವಿಕೆಟ್ ಕಿತ್ತ ನಿತೀಶ್ ರಾಣಾ ಆಕ್ರೋಶ ವ್ಯಕ್ತಪಡಿಸಿದಾಗಲೂ ನಿತೀಶ್ ಗೆ ಬ್ಯಾಟ್ ನೀಡುವ ಮೂಲಕ ಕೊಹ್ಲಿ ತಮ್ಮ ಕ್ರೀಡಾ ಸ್ಫೂರ್ತಿಯನ್ನು ತೋರ್ಪಡಿಸಿದ್ದರು.

Leave a Reply

Your email address will not be published. Required fields are marked *