ಕಾಪು; ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಪಥಸಂಚಲನ

ನ್ಯೂಸ್ ಕನ್ನಡ ವರದಿ-(18.04.18): ಕಾಪು: ರಾಜ್ಯದಲ್ಲಿ ಮೇ 12ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಭಯಮುಕ್ತವಾಗಿ ಪಾಲ್ಗೊಂಡು ಮತದಾನ ಮಾಡುವ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬುವ ಸಲುವಾಗಿ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಕಟಪಾಡಿ,ಕಾಪು, ಪಡುಬಿದ್ರಿ, ಹೆಜಮಾಡಿ, ಉಚ್ಚಿಲ,ಶಿರ್ವ ಪೇಟೆಯಲ್ಲಿ ಪಥಸಂಚಲನ ನಡೆಯಿತು.

ಪಥಸಂಚಲನದಲ್ಲಿ ಒರಿಸ್ಸಾ ಮೂಲದ ಬಿಎಸ್ಎಫ್ ನ ಸುಮಾರು 100 ಜವಾನರು ಮತ್ತು ಪಡುಬಿದ್ರಿ ಠಾಣಾ ಸಬ್ ಇನ್‌ಸ್ಪೆಕ್ಟರ್‌ ಸತೀಶ್,ಕಾಪು ಠಾಣಾ ಸಬ್ ಇನ್‌ಸ್ಪೆಕ್ಟರ್‌ ನಿತ್ಯಾನಂದ ಗೌಡ, ಶಿರ್ವ ಠಾಣಾ ಸಬ್ ಇನ್‌ಸ್ಪೆಕ್ಟರ್‌ ಖಾದರ್ ಸಹಿತ ಕಾಪು ವೃತ್ತದಿಂದ 50 ಪೊಲೀಸರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *