ಜಾರ್ಖಂಡ್: ಮದುವೆ ಮನೆಯಲ್ಲಿ ಗೋಮಾಂಸದ ಅಡುಗೆ ಮಾಡಿದ್ದಾರೆಂದು ಹಲ್ಲೆ ನಡೆಸಿ ಮನೆಗೆ ಬೆಂಕಿ!

ನ್ಯೂಸ್ ಕನ್ನಡ ವರದಿ-(18.04.18): ಗೋಮಾಂಸದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಇನ್ನೂ ಕೊನೆಯಾಗಿಲ್ಲ. ಇದೀಗ ಜಾರ್ಖಂಡ್ ನಲ್ಲಿ ಗೋರಕ್ಷಕರಿಂದ ಮತ್ತೊಂದು ಅಮಾನವೀಯ ಕೃತ್ಯವು ವರದಿಯಾಗಿದ್ದು, ಮದುವೆ ಮನೆಯಲ್ಲಿ ಗೋಮಾಂಸದ ಅಡುಗೆ ಮಾಡಿದ್ದಾರೆಂದು ಆರೋಪಿಸಿ ಹಲವು ಮಂದಿಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಮದುವೆ ಮನೆ ಸೇರಿದಂತೆ ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದೆ.

ಗ್ರಾಮಸ್ಥರಿಗೆ ಮದುವೆ ಮನೆಯ ಹಿಂದುಗಡೆ ಹಸುವಿನ ಕಾಲುಗಳು ಕಾಣಸಿಕ್ಕಿದ್ದು, ಇದರ ಆಧಾರದ ಮೇಲೆ ಮನೆಗೆ ದಾಳಿ ಮಾಡಿದ್ದರು ಎನ್ನಲಾಗಿದೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಿದ್ದೇವೆ. ಇನ್ನು ಈ ಮಾಂಸವು ಗೋವಿನದ್ದು ಹೌದೋ ಅಲ್ಲವೋ ಎಂದು ತಿಳಿಯಲು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *