ಅತ್ಯಾಚಾರವೆಂದರೆ ಅತ್ಯಾಚಾರ ಮಾತ್ರ, ಅದನ್ನು ರಾಜಕೀಯ ಮಾಡಬಾರದು: ಲಂಡನ್ ನಲ್ಲಿ ಮೋದಿ

ನ್ಯೂಸ್ ಕನ್ನಡ ವರದಿ-(19.04.18): ಒಂದೆಡೆ ಭಾರತದಾದ್ಯಂತ ಹಲವಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಈ ನಡುವೆ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಲಂಡನ್ ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಅತ್ಯಾಚಾರಗಳು ಕೇವಲ ಅತ್ಯಾಚಾರವಷ್ಟೇ, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಭಾರತ್ ಕೀ ಬಾತ್- ಸಬ್ಕೆ ಸಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ತಾನು ಬಾಲ್ಯದಲ್ಲಿ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಕುರಿತು ಉಲ್ಲೇಖಿಸಿದರು. ರೈಲ್ವೆ ನಿಲ್ದಾಣದಿಂದ ಅರಮನೆಗೆ ತಲುಪಿದರು ಎಂದು ಹೇಳುವುದು ಸುಲಭ. ಆದರೆ ಆ ಪಯಣ ಕಷ್ಟಕರವಾಗಿತ್ತು. ರೈಲ್ವೆ ನಿಲ್ದಾಣದಲ್ಲಿನ ಚಹಾ ಮಾರುವ ಬದುಕು ಹಲವಾರು ವಿಷಯಗಳನ್ನು ಕಲಿಸಿತು. ಜನರು ಮನಸ್ಸು ಮಾಡಿದರೆ ಒಬ್ಬ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಬಹುದು ಎಂದು ಮೋದಿ ಹೇಳಿದ್ದಾರೆ. ಅತ್ಯಾಚಾರ ಎಂದರೆ ಅತ್ಯಾಚಾರ ಅಷ್ಟೇ. ಈ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆದವು.ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆಯಿತು ಎಂಬುದರ ಬಗ್ಗೆ ಹೋಲಿಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಅತ್ಯಾಚಾರ ಅತಿ ದುಃಖದ ಸಂಗತಿ. ಅತ್ಯಾಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದಿದ್ದಾರೆ.

Leave a Reply

Your email address will not be published. Required fields are marked *