ಮಲ್ಪೆ: ಮತದಾನದ ಬಗ್ಗೆ ಜಾಗೃತಿ ಅಭಿಯಾನ
ನ್ಯೂಸ್ ಕನ್ನಡ ವರದಿ-(19.04.18): ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಏಪ್ರಿಲ್ 18 ರಂದು ಮಲ್ಪೆ ಕಡಲ ಕಿನಾರೆಯ ಮಹಾತ್ಮ ಗಾಂಧಿಯವರ ಪ್ರತಿಮೆಯ ಎದುರು ಸಾರ್ವಜನಿಕರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಅಭಿಯಾನ ನಡೆಯಿತು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಮತದಾನದ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಸಧೃಢವಾಗುತ್ತದೆ. ಮತದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಸಹಾಯ ತರಬೇತಿ ಸಂಸ್ಥೆಯ ಉಪನ್ಯಾಸಕ ಗುರುಬಸಪ್ಪ, ಗಣೇಶ್ ಪ್ರಸಾದ್, ತಾರನಾಥ್, ದತ್ತಾತ್ತ್ರೇಯ ಕಿಣಿ, ನೀಲಕಂಠಸ್ವಾಮಿ, ಅಕ್ಷಯ್, ನಿಖಿಲ್, ಬಾಲಕೃಷ್ಣ, ಹರೀಶ್ ಅಂಬಲಪಾಡಿ, ಕೃಷ್ಣ ಅಂಬಲಪಾಡಿ ಉಪಸ್ಥಿತರಿದ್ದರು.