ದೇಶದಲ್ಲಿ ಬರೋಬ್ಬರಿ 70ಸಾವಿರ ಕೋಟಿ ರೂ. ನಗದು ಕೊರತೆ!

ನ್ಯೂಸ್ ಕನ್ನಡ ವರದಿ-(19.04.18): ದೇಶದಾದ್ಯಂತ ಎಟಿಎಂಗಳಲ್ಲಿ ಹಣದ ಕೊರತೆಯು ಎದುರಾಗಿದೆ. ಸುಮಾರು ಹತ್ತಕ್ಕೂ ಹೆಚ್ಚಿನ ರಾಜ್ಯಗಳಲ್ಲಿನ ಏಟಿಎಮ್ ಗಳಲ್ಲಿ ಹಣವಿಲ್ಲದೇ ಮುಚ್ಚಲಾಗಿದೆ. ಈ ನಗದು ಕೊರತೆಯನ್ನು ನಿಭಾಯಿಸುವುದಕ್ಕಾಗಿ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದ್ದು, 2000ರೂ. ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣವನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಇನ್ನು ಈ ನೋಟುಗಳು ಏಟಿಎಂಗೆ ತಲುಪಲು ಸುಮಾರು ಒಂದು ತಿಂಗಳುಗಳ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿದು ಬಂದಿದೆ.

ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಣದ ಕೊರತೆಯು ಎದುರಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯು ನಡೆಯಲಿರುವ ಕಾರಣದಿಂದಾಗಿ ಸುಮಾರು 40% ಎಟಿಎಂಗಳಲ್ಲೂ ಹಣದ ಕೊರತೆಯು ಎದುರಾಗಿದೆ. ಸದ್ಯ 70,000ಕೋಟಿ ರೂ. ನೋಟುಗಳ ಕೊರತೆ ಎದುರಾಗಿದೆ. ಈ ಕುರಿತು ಮಾತನಾಡಿದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ” 2000ರೂ. ನೋಟುಗಳನ್ನು ಕೇವಲ ದಾಸ್ತಾನು ಇರಿಸುವವರಿಗೆಂದೇ ತಯಾರಿಸಲಾಗಿದೆ. ನೋಟು ಬ್ಯಾನ್ ನ ಭೂತ ಮತ್ತೆ ಮತ್ತೆ ಕಾಡತೊಡಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *