ಕೇವಲ ಶಾಸಕನಾಗಲು ನಾನು ಸ್ಪರ್ಧಿಸಲಾರೆ: ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಾನಮಾನ ನೀಡಬೇಕು: ಅಂಬರೀಷ್!

ನ್ಯೂಸ್ ಕನ್ನಡ ವರದಿ(19-04-2018): ಕೇವಲ ನನನ್ನು ಶಾಸಕನಾಗಿ ಮಾಡುವುದಿದ್ದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ನನಗೆ ಸೂಕ್ತ ಸ್ಥಾನಮಾನ ನೀಡುವುದಾದರೆ ಮಾತ್ರ ನಾನು ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಅಂಬರೀಷ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮಂಡ್ಯದಿಂದ ಅಧಿಕೃತ ಅಭ್ಸರ್ಥಿಯಾಗಿ ಘೋಷಿಸಿದ್ದರೂ ಸಹ ಇದುವರೆಗೆ ಬಿಫಾರಂ ಪಡೆಯದ ಅಂಬರೀಷ್ ಅವರ ಮನವೊಳಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಧಾನಕ್ಕಾಗಿ ಕಳುಹಿಸಿದ್ದರು. ಈ ವೇಳೆ ಗೆಳೆಯ ಜಾರ್ಜ್ ಅವರೊಂದಿಗೆ ಈ ಕುರಿತು ಷರತ್ತು ವಿಧಿಸಿದ ಅಂಬರೀಶ್ ಹಿಂದೆ ಹೇಳದೆ ಕೇಳದೆ ಸಚಿವ ಸ್ಥಾನದಿಂದ ತನ್ನನ್ನು ಕೈಬಿಟ್ಟದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಶಾಸಕನಾಗಲು ನಾನೇಕೆ ಚುನಾವಣೆಗೆ ಸ್ಪರ್ಧೆ ಮಾಡಲಿ. ನನ್ನನ್ನ ಕೇಳದೇ ಸಚಿವ ಸ್ಥಾನದಿಂದ ತೆಗೆದಿದ್ದೀರಿ. ಬಳಿಕ ನನ್ನನ್ನು ಕ್ಯಾರೆ ಎನ್ನಲಿಲ್ಲ. ಒಂದು ವೇಳೆ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನನಗೆ ಏನು ಸ್ಥಾನಮಾನ ಕೊಡ್ತೀರಾ? ಈ ಬಗ್ಗೆ ಮೊದಲೇ ನಿರ್ಧಾರ ಮಾಡಿ ತಿಳಿಸಿ ಜತೆಗೆ ಉಸ್ತುವಾರಿ ಸಹ ನನಗೆ ನೀಡಬೇಕು ಎಂದು ಅಂಬರೀಷ್ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಷರತ್ತನ್ನು ತಾನು ಪರಮೇಶ್ವರ್ ಅವರ ಗಮನಕ್ಕೆ ತರುವುದಾಗಿ ಜಾರ್ಜ್ ಹೇಳಿದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *