ದಿನನಿತ್ಯ ಟೀಕೆಗಳನ್ನು ತಿನ್ನುವುದೇ ನನ್ನ ‘ಫಿಟ್ ನೆಸ್ ಸೀಕ್ರೆಟ್’ ಆಗಿದೆ: ಪ್ರಧಾನಿ ನರೇಂದ್ರ ಮೋದಿ!
ನ್ಯೂಸ್ ಕನ್ನಡ ವರದಿ(19-04-2018): ನಿಮ್ಮ ಫಿಟ್ ನೆಸ್ ಗುಟ್ಟೇನು ಎಂಬ ವ್ಯಕ್ತಿಯೋರ್ವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ನಾನು ದಿನಂಪ್ರತಿ ಎರಡು ಕೆಜಿಯಷ್ಟು ಟೀಕೆಗಳನ್ನು ಸೇವಿಸುತ್ತಿದ್ದು, ಅದೇ ನನ್ನ ಫಿಟ್ ನೆಸ್ ಸೀಕ್ರೆಟ್ ಆಗಿದೆ. ಅದರಿಂಲೇ ನಾನಿಷ್ಟು ಆರೋಗ್ಯವಂತನಾಗಿದ್ದೇನೆ ಎಂದು ಪ್ರಧಾನಿ ನುಡಿದರು.
ಲಂಡನ್ ಪ್ರವಾಸದಲ್ಲಿರುವ ಮೋದಿ ಅಲ್ಲಿಯ ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್ ನಲ್ಲಿ ‘ಭಾರತ್ ಕೀ ಬಾತ್ ಸಬ್ ಕೆ ಸಾಥ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ,, ದಿನಾಲೂ ಟೀಕೆಗಳನ್ನು ತಿನ್ನುವುದರಿಂದ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎನ್ನುವುದಕ್ಕೆ ನಾನು ಉದಾಹರಣೆಯಾಗಿದ್ದೇನೆ ಎಂದು ವ್ಯಂಗ್ಯವಾಡಿದರು.