ಅನಂತ್ ಕುಮಾರ್ ಹೆಗಡೆಯವರೇ ನಿಮಗೆ ನಾಚಿಕೆಯಾಗಬೇಕು; ನಿಮ್ಮ ಆರೋಪಕ್ಕೆ ಮಿತಿಯಿರಲಿ: ಸಿದ್ಧರಾಮಯ್ಯ

ನ್ಯೂಸ್ ಕನ್ನಡ ವರದಿ(19-04-2018): ಅನಂತ್ ಕುಮಾರ್ ಹೆಗಡೆಯವರೇ ನಿಮ್ಮ ಆರೋಪಗಳಿಗೆ ಮಿತಿಯಿರಲಿ, ನಿಮಗೆ ನಾಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನಂತ್ ಕುಮಾರ್ ಹೆಗಡೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ರಾತ್ರಿ 11.30ಕ್ಕೆ ಹಾವೇರಿ‌ ಜಿಲ್ಲೆ ರಾಣಿಬೆನ್ನೂರು ಹಲಗೇರಿ ಸಮೀಪ ಸಚಿವ ಅನಂತಕುಮಾರ ಹೆಗಡೆಯವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಇದು ನನ್ನ ಪ್ರಾಣಕ್ಕೆ ಹಾನಿಯನ್ನುಂಟು ಮಾಡಲು ನಡೆಸಿದ ಕೃತ್ಯ ಎಂದು ಹೆಗಡೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಸಿಎಂ ಸಿದ್ಧರಾಮಯ್ಯ, ಯಡಿಯೂರಪ್ಪಗಿಂತಲೂ ಪ್ರಮುಖರೆನ್ನಿಸಿಕೊಳ್ಳಲು ಅನಂತಕುಮಾರ ಹೆಗಡೆ ಒದ್ದಾಟ ನಡೆಸುತ್ತಿದ್ದು ಅದಕ್ಕಾಗಿ ಅಪಘಾತದ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಪಘಾತ ಮಾಡಲು ಯತ್ನಿಸಿದ ಲಾರಿಯು ಬಿಜೆಪಿಯ ಕೊಪ್ಪ ಘಟಕದ ಅಧ್ಯಕ್ಷ ರಮೇಶ್ ಅವರ ಸಹೋದರ ನಾಗೇಶ್ ಎಂಬುವವರ ಹೆಸರಲ್ಲಿ ನೋಂದಣಿಯಾಗಿದ್ದು, ಇದು ಚುನಾವಣಾ ಸಂದರ್ಭದಲ್ಲಿ ಅನಂತ್ ಕುಮಾರ್ ಹೆಗಡೆಯವರ ತಂತ್ರವಾಗಿದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *