ನನ್ನ ಆಪ್ತರಿಗೆ ಟಿಕೆಟ್ ನೀಡಿ: ಯಡಿಯೂರಪ್ಪಗೆ ಎಸ್ಎಂ ಕೃಷ್ಣ ಪತ್ರ!
ನ್ಯೂಸ್ ಕನ್ನಡ ವರದಿ(19-04-2018): ತನ್ನ ನಾಲ್ವರು ಆಪ್ತರಿಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಎಸ್ಎಂ ಕೃಷ್ಣ ಅವರು ತಮ್ಮ ಪತ್ರದ ಮೂಲಕ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ತನ್ನ ನಾಲ್ವರು ಆಪ್ತರನ್ನು ಪರಿಗಣಿಸುವಂತೆ ತಿಳಿಸಿದ್ದು, ಪ್ರಮುಖವಾಗಿ ಕಡೂರು ಕ್ಷೇತ್ರದಿಂದ ಬೀರೂರು ದೇವರಾಜ್, ಗಾಂಧಿನಗರದಿಂದ ಎಂ.ಬಿ.ಶಿವಪ್ಪ, ಚಾಮರಾಜನಗರದಿಂದ ಡಿ.ಮಾದೇಗೌಡ, ಮಂಡ್ಯ ಕ್ಷೇತ್ರದಿಂದ ಎನ್.ಶಿವಣ್ಣ ಅವರ ಹೆಸರನ್ನು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕಡೂರು ಕ್ಷೇತ್ರದ ಅಭ್ಯರ್ಥಿಯಾಗಿ ಬೆಳ್ಳಿ ಪ್ರಕಾಶ್ ಅವಕನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿರುವ ಬಿಜೆಪಿ ಇನ್ನುಳಿದ ಮೂರು ಕ್ಷೇತ್ರಗಳಿಗೆ ಕೃಷ್ಣರವರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತದೋ ಕಾದು ನೋಡಬೇಕಾಗಿದೆ.