ಬಿಜೆಪಿ ಪಕ್ಷ ತ್ಯಜಿಸುವುದಿಲ್ಲ, ಆದರೆ ಹಾಲಪ್ಪನನ್ನು ಸೋಲಿಸದೇ ಬಿಡುವುದಿಲ್ಲ: ಬೇಳೂರು ಗೋಪಾಲಕೃಷ್ಣ!
ನ್ಯೂಸ್ ಕನ್ನಡ.ವರದಿ(19-04-2018): ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಇದ್ಕೊಂಡೇ ಹರತಾಲು ಹಾಲಪ್ಪನನ್ನು ಸೋಲಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ರಾಘವೇಶ್ವರ ಸಭಾಭವನದಲ್ಲಿ ಜೊತೆ ರಾಜಕೀಯದ ಮುಂದಿನ ಹೆಜ್ಜೆ ಕುರಿತು ಸಮಾಲೋಚನಾ ಸಭೆ ನಡೆಸಿದ ಅವರು, ನಾನು ಕೈಗೆ ಬಳೆ ತೊಟ್ಟಿಲ್ಲ. ಸಾಗರದಿಂದ ನನ್ನನ್ನು ಕಳಿಸಿಕೊಡುವ ಮಾತುಗಳನ್ನಾಡಿರುವ ಹರತಾಳು ಹಾಲಪ್ಪನನ್ನು ಕಳಿಸುವ ದಿನ ಹತ್ತಿರ ಬಂದಿದೆ ಅದಕ್ಕಾಗಿ ಅಭಿಮಾನಿಗಳ ಸಲಹೆ ಕೇಳುವ ಉದ್ದೇಶದಿಂದ ಇಲ್ಲಿ ಬಂದಿದ್ದೇನೆ ಎಂದರು.
ಈ ಮೊದಲು ಯಡಿಯೂರಪ್ಪ ಅಲ್ಲ ಅವರಪ್ಪ ಹೇಳಿದರೂ ಚುನಾವಣೆಯಲ್ಲಿ ಬೇಳೂರು ಅವರನ್ನು ಸೋಲಿಸುತ್ತೇನೆ ಎಂದು ಅವಮಾನಕಾರಿಯಾಗಿ ಮಾತನಾಡಿದ ಹಾಲಪ್ಪಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿಯನ್ನು ಊರಿನಿಂದ ಹೊರಗೆ ಹಾಕಬೇಕು ಎಂಬರ್ಥದಲ್ಲಿ ಮಾತನಾಡಿ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡಲಾಗುತ್ತದೆ. ಹಾಗಾದರೆ ನಾನು ಮಾಡಿದ ತಪ್ಪೇನು ಎಂದು ಪ್ರಶ್ನಿಸಿದ ಅವರು ಹರತಾಲು ಹಾಲಪ್ಪನನ್ನು ಸೋಲಿಸುವುದೇ ನನ್ನ ಗುರಿ ಎಂದರು.