ನಾಲ್ಕು ದಶಕಗಳ ಬಳಿಕ ಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಸಿನೆಮಾ ಪ್ರದರ್ಶನ ಪ್ರಾರಂಭ!

ನ್ಯೂಸ್ ಕನ್ನಡ ವರದಿ(19-04-2018): ಸೌದಿ ಅರೇಬಿಯಾದಲ್ಲಿ ಸುಮಾರು 40 ವರ್ಷಗಳಿಂದ ತನ್ನ ಧಾರ್ಮಿಕ ಚೌಕಟ್ಟಿನಿಂದಾಗಿ ನಿಶೇಧಿಸಲ್ಪಟ್ಟಿದ್ದ ಸಿನಿಮಾವು ಬುಧವಾರದಂದು ಭರ್ಜರಿಯಾಗಿ ಪುನರ್ ಪ್ರಾರಂಭವಾಯಿತು. ರಾಜಧಾನಿ ರಿಯಾದ್ ನಲ್ಲಿ ಪ್ರಪ್ರಥಮ ಸಿನಿಮಾ ಪ್ರದರ್ಶನವು ಯಶಸ್ವಿಯಾಗಿ ಉದ್ಘಾಟನೆಯಾಯಿತು.

ರಾಜಧಾನಿ ರಿಯಾದ್​ನಲ್ಲಿ ಮೊದಲ ಪ್ರದರ್ಶನ ನಡೆದಿದ್ದು, ಸೌದಿ ಹಾಗೂ ವಿದೇಶಿ ವೀಕ್ಷಕರು ಮಾರ್ವೆಲ್​ ಅಭಿನಯದ ಸೂಪರ್​ ಹಿಟ್​ ಚಿತ್ರ ಬ್ಲ್ಯಾಕ್​ ಪ್ಯಾಂಥರ್​ ಚಿತ್ರವನ್ನು ವೀಕ್ಷಿಸಿದ್ದಾರೆ. ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವ್ವಾದ್​ ಅಲವಾಡ್​ ಅವರು ಸೆಲೆಬ್ರೆಟಿ ಹಾಗೂ ಕೆಲವು ಸಿನಿಮಾ ನಿರ್ಮಾಪಕರೊಂದಿಗೆ ಚಿತ್ರ ವೀಕ್ಷಿಸಲು ಯೋಜನೆ ಹಾಕಿಕೊಂಡಿದ್ದಾರೆ.

ವಿಸನ್​ 2030ರ ಅಡಿಯಲ್ಲಿ ಸೌದಿ ಅರೇಬಿಯಾದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮವನ್ನು ಸೌದಿ ರಾಜ ಮಹಮ್ಮದ್​ ಬಿನ್​ ಸಲ್ಮಾನ್​ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಕಮರ್ಷಿಯಲ್​ ಚಲನಚಿತ್ರಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *