ಪತ್ನಿ ದಿನವಿಡೀ ವಾಟ್ಸಾಪ್ ಬಳಸುತ್ತಾಳೆಂದು ಪತಿ ಮಾಡಿದ್ದೇನು ಗೊತ್ತೇ?
ನ್ಯೂಸ್ ಕನ್ನಡ ವರದಿ(19-04-2018): ಪತಿಯೋರ್ವ ಸಾಮಾಜಿಕ ತಾಣದಲ್ಲಿ ಸಕ್ರಿಯಳಾಗಿ ವಾಟ್ಸ್ ಆ್ಯಪ್ ಮೂಲಕ ಸಮಯ ಕಳೆಯುತ್ತಿದ್ದ ತನ್ನ ಪತ್ನಿಯನ್ನು ಕೊಂದು ಹಾಕಿದ ಘಟನೆ ದೆಹಲಿಯ ಗುರುಗ್ರಾಮ್ ಎಂಬಲ್ಲಿಂದ ವರದಿಯಾಗಿದೆ.
35 ವರ್ಷದ ಹರಿ ಓಂ ಎಂಬವನು ತನ್ನ 32ರ ಹರೆಯದ ಪತ್ನಿ ಲಕ್ಷ್ಮೀ ಎಂಬವಳು ದಿನ ನಿತ್ಯ ಸಾಮಾಜಿಕ ತಾಣದಲ್ಲಿ ಸಕ್ರಿಯಳಾದ್ದು, ತನ್ನನ್ನು ಹಾಗೂ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಳು ಅದಲ್ಲದೇ ಮಕ್ಕಳಿಗೆ ಊಟವನ್ನು ಸರಿಯಾಗಿ ತಯಾರಿಸಿ ಕೊಡುತ್ತಿರಲಿಲ್ಲ. ಅನೇಕ ಬಾರಿ ನಾನು ಅವಳಿಗೆ ಎಚ್ಚರಿಕೆ ಕೊಟ್ಟರೂ ಸುಧಾರಿಸಿಕೊಳ್ಳದ ಆಕೆಯನ್ನು ಇರಿದು ಕೊಂದಿದ್ದೇನೆ ಎಂದು ಆತ ಪೋಲಿಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
2006ರಲ್ಲಿ ನಮಗೆ ಮದುವೆಯಾಗಿದ್ದು, ನಮಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮದು ಸುಖೀ ಸಂಸಾರವಾಗಿದ್ದು, ಕೆಲವು ವರ್ಷಗಳ ಹಿಂದೆ ನಾನು ಅವಳಿಗೊಂದು ಸ್ಮಾರ್ಟ್ ಫೋನ್ ತಂದುಕೊಟ್ಟ ನಂತರ ನಮ್ಮ ಕುಟುಂಬದಲ್ಲಿ ನೆಮ್ಮದಿ ಇಲ್ಲದಾಗಿದೆ. ನಾನು ಅನೇಕ ಬಾರಿ ಅವಳಿಗೆ ಬುದ್ಧಿ ಹೇಳಿಯೂ ಆಕೆ ಸುಧಾರಿಸಿಕೊಳ್ಳಲಿಲ್ಲ. ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ದಿನನಿತ್ಯ ವಾಟ್ಸಪ್ ನಲ್ಲಿ ಕಾಲ ಕಳೆಯುತ್ತಿದ್ದಳು. ಇದರಿಂದ ಬೇಸತ್ತು ನಾನು ಆಕೆಯನ್ನು ಕೊಂದುಹಾಕಿದ್ದೇನೆ ಎಂದು ಪತಿ ಹರಿ ಓಂ ಪೋಲೀಸರ ಮುಂದೆ ಹೇಳಿಕೊಂಡಿದ್ದಾನೆ.