ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿಗಳ ಖುಲಾಸೆ ತೀರ್ಪು ನೀಡಿದ್ದ ನ್ಯಾಯಾಧೀಶರ ರಾಜಿನಾಮೆ ತಿರಸ್ಕಾರ!
ನ್ಯೂಸ್ ಕನ್ನಡ ವರದಿ(19-04-2018): ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಮೆಕ್ಕಾ ಮಸೀದಿ ಸ್ಪೋಟದ ಎಲ್ಲಾ ಆರೋಪಿಗಳನ್ನು ದೋಷ ಮುಕ್ತರೆಂದು ಘೋಷಿಸುವ ಮೂಲಕ ಖುಲಾಸೆಗೊಳಿಸಿದ್ದ ರಾಷ್ಟ್ರೀಯ ತನಿಖಾ ದಳದ ನ್ಯಾಯಾಧೀಶ ರವೀಂದ್ರ ರೆಡ್ಡಿಯವರ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ.
ನ್ಯಾಯಾಧೀಶ ರವೀಂದ್ರ ರೆಡ್ಡಿ ಅವರು ಸೋಮವಾರ ತೀರ್ಪು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿ ಎಲ್ಲರನ್ನು ದಿಗ್ಭ್ರಮೆ ಮೂಡಿಸಿದ್ದರು. ಆದರೆ, ಇದೀಗ ರಾಜೀನಾಮೆಯನ್ನು ತಿರಸ್ಕರಿಸಲಾಗಿದ್ದು, ರಜೆಯನ್ನು ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಲಾಗಿದೆ.
ನ್ಯಾಯಾಧೀಶರು ರಾಜೀನಾಮೆ ಸಲ್ಲಿಸಿದ್ದ ಬಳಿಕ 15 ದಿನಗಳ ರಜೆಯನ್ನು ಕೇಳಿದ್ದರು. ಆದರೆ, ಅದನ್ನು ನಿರಾಕರಿಸಲಾಗಿತ್ತು.