ಉತ್ತರ ಪ್ರದೇಶದಲ್ಲಿ ಮಾಯಾವತಿಯೇ ಪರಿಣಾಮಕಾರಿ ಮುಖ್ಯಮಂತ್ರಿ ಎಂದ ಯೋಗಿ ಸಂಪುಟದ ಸಚಿವ!

ನ್ಯೂಸ್ ಕನ್ನಡ ವರದಿ(19-04-2018): ಉತ್ತರ ಪ್ರದೇಶದಲ್ಲಿ ಮಾಯಾವತಿಯೇ ಪರಿಣಾಮಕಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ ಎಂದು ಹೇಳುವ ಮೂಲಕ ಯೋಗಿ ಆದಿಥ್ಯನಾತ್ ಸಂಪುಟದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸರಕಾರಕ್ಕೆ ಮುಜುಗರವನ್ನು ಉಂಟುಮಾಡಿದ್ದಾರೆ.

ಖಾಸಗಿ ಸುದ್ಧಿ ವಾಹಿನಿಯಂದಕ್ಕೆ ನೀಡಿದ ಸಂದರ್ಶನದಲ್ಲಿ ಉನ್ನೋವ್ ಅತ್ಯಾಚಾರದ ಕುರಿತು ಮಾತನಾಡುತ್ತ ಈ ಪ್ರಕರಣದಲ್ಲಿ ಸರಕಾರದ ನಿಲುವು ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದರಲ್ಲದೇ ಸರಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಹಿಂದಿನ ಅಖಿಲೇಶ್ ಸರಕಾರಕ್ಕಿಂತ ಮಾಯಾವತಿ ಪರಿಣಾಮಕಾರಿಯಾಗಿದ್ದರು. ಸರಕಾರದ ಕಾರ್ಯ ನಿರ್ವಾಹಕರ ಮೇಲೆ ನಿಯಂತ್ರಣವನ್ನು ಹೊಂದಿದ್ದರು ಮಾತ್ರವಲ್ಲ ಅವರ ಆಡಳಿತವೂ ಬಹಳ ಪರಿಣಾಮಕಾರಿಯಾಗಿತ್ತು ಎಂದು.

Leave a Reply

Your email address will not be published. Required fields are marked *