ವಿದೇಶ ಪರ್ಯಟನೆ ನಿಲ್ಲಿಸಿ ದೇಶದ ಜನತೆಯ ಮನೆಗೆ ಭೇಟಿ ನೀಡಿ: ಪ್ರಧಾನಿ ಮೋದಿಗೆ ತೊಗಾಡಿಯ ಕಿವಿಮಾತು!

ನ್ಯೂಸ್ ಕನ್ನಡ ವರದಿ(19-04-2018): ಪ್ರಧಾನ ಮಂತ್ರಿ ಮೋದಿಯವರು ವಿದೇಶ ಪ್ರವಾಸ ಮಾಡುವುದನ್ನು ಕೈಬಿಟ್ಟು ದೇಶದಲ್ಲಿರುವ ಬಡವರ ಮನೆಗಳಿಗೆ ಭೇಟಿ ನೀಡಿ ಅವರ ಕಷ್ಟಗಳನ್ನು ಅರ್ಥೈಸಲು ಪ್ರಯತ್ನಿಸಬೇಕೆಂದು ಉಚ್ಚಾಟಿತ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರಧಾನಿ ಮೋದಿಗೆ ಕಿವಿಮಾತು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ಕೇಂದ್ರ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಮಾಡುವ ಮೂಲಕ ಧರಣಿ ನಡೆಸುತ್ತಿದ್ದ ತೊಗಾಡಿಯಾ ಅವರು ಸಾದು ಸಂತರ ಸಲಹೆಯ ಮೇರೆಗೆ ತನ್ನ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು. ಕಿಡ್ನಿ ಖಾಯಿಲೆ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ತೊಗಾಡಿಯಾ ಕಳೆದೆರಡು ದಿನಗಳ ಉಪವಾಸ ಸತ್ಯಾಗ್ರಹದಿಣದಾಗಿ 3 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆಂದು ಅವರ ವೈದ್ಯರು ತಿಳಿಸಿದ್ದಾರೆ.

ರೈತರ ಸಾಲ ಮನ್ನಾಮಾಡುವ ಸಲುವಾಗಿ, ಯುವಕರಿಗೆ ಉದ್ಯೋಗ ಕಲ್ಪಿಸಲು ಹಾಗೂ ಮಹಿಳೆಯರ ಸುರಕ್ಷತೆಗಾಗಿ ನಾನು ಹೋರಾಡುವುದಾಗಿ ತಿಳಿಸಿದ ತೊಗಾಡಿಯಾ, ಜನರ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ವಿದೇಶ ಯಾತ್ರೆಯನ್ನು ಕೈಬಿಟ್ಚು ದೇಶದಲ್ಲಿ ಜನರ ಮನೆಗಳಿಗೆ ಭ್ಟಿ ನೀಡುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *